ಸಾಂದರ್ಭಿಕ ಚಿತ್ರ
ಮಂಡ್ಯ: ನಗರದ ಶ್ರೀ ರಂಜಿನಿ ಕಲಾ ವೇದಿಕೆಯು ತನ್ನ 35ನೇ ವರ್ಷದ ಹೊಸ ವರ್ಷಾಚರಣೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ 1 ರ ಶನಿವಾರ ನಗರದ ವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಕೃಷಿಕ್ ಲಯನ್ಸ್ ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇನ್ನಿತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದೆ.
ಅಂದು ಸಮಾರಂಭವನ್ನು ಲಯನ್ ಬಿ.ಎಂ. ಅಪ್ಪಾಜಪ್ಪ ಉದ್ಘಾಟಿಸಲಿದ್ದು ಖ್ಯಾತ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಅಧ್ಯಕ್ಷತೆ ವಹಿಸುವರು. ಅಭಿನಂದನಾ ಭಾಷಣವನ್ನು ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಡಾ.ಹೆಚ್.ಎಸ್. ಮುದ್ದೇಗೌಡ ಮಾಡಲಿದ್ದು ಕೃಷಿಕ್ ಲಯನ್ಸ್ ನ ಆಡಳಿತಾಧಿಕಾರಿ ಕೆ.ಟಿ. ಹನುಮಂತು ಜನತೆಗೆ ಹೊಸ ವರ್ಷದ ಶುಭಾಶಯ ಕೋರುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರುಗಳಾದ ಸಿದ್ದಲಿಂಗಯ್ಯ ಬನ್ನಂಗಾಡಿ, ಶ್ರೀರಂಜಿನಿ ಶರಣ ಸಾಹಿತ್ಯ ರತ್ನ ಪ್ರಶಸ್ತಿ. ಲಯನ್ ಡಾ.ನಾಗರಾಜ್ ಬಾಯರಿ ಶ್ರೀರಂಜಿನಿ ಸಮಾಜ ಸೇವಾ ರತ್ನ ಪ್ರಶಸ್ತಿ. ಶ್ರೀಮತಿ ಕಮಲ ರಾಜೇಶ್ ತುಮಕೂರು ಶ್ರೀರಂಜಿನಿ ಸಾಹಿತ್ಯ ರತ್ನ ಪ್ರಶಸ್ತಿ, ಶ್ರೀಮತಿ ಶಿಲ್ಪಾ ಸತ್ಯಾನಂದ್ ಮಂಡ್ಯ ಶ್ರೀ ರಂಜಿನಿ ಶಿಕ್ಷಣ ರತ್ನ ಪ್ರಶಸ್ತಿ. ಕುಮಾರ ಸ್ವಾಮಿ (ಗುಂಡಣ್ಣ) ಶ್ರೀರಂಜಿನಿ ರಂಗರತ್ನ ಪ್ರಶಸ್ತಿ ಯನ್ನು ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಡಾ.ಟಿ.ಎಸ್. ಸತ್ಯನಾರಾಯಣ್.
ಕೆ.ಟಿ.ಶಂಕರೇಗೌಡ.ಎಂ.ವಿ. ಧರಣೇಂದ್ರಯ್ಯ ಸ್ವಾಮಿ ಮನ್ ಮುಲ್ ಮಾಜಿ ನಿರ್ದೇಶಕರಾದ ಶ್ರೀಮತಿ ನೀನಾ ಪಟೇಲ್ ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿ ಡಾ.ಎಸ್. ಶ್ರೀನಿವಾಸ ಶೆಟ್ಟಿ ಮಂಡ್ಯ ಇತರರು ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ವಿಶೇಷ ಅಭಿನಂದನೆಯನ್ನು ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪಿ.ಎಂ.ಸೋಮಶೇಖರ್ ಹಾಗೂ ಡಾ. ಮುದ್ದೇಗೌಡ ಅವರಿಗೆ ನೆರವೇರಿಸಲಾಗುವುದು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಂಡುರಂಗ ಬ್ರಿಗೇಡ್ ನ ಕಾರ್ಯದರ್ಶಿ ಹರ್ಷ ಪೇಟ್ಕರ್. ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ್. ಎನ್.ಡಿ.ಹರಿ ಪ್ರಸಾದ್. ಉಧ್ಯಮಿ ಮಂಜುನಾಥ್. ಪಿ.ಚಂದ್ರಶೇಖರ್.ಬಸವರಾಜು ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಎ. ನಾಗರಾಜ್ ಭಾಗವಹಿಸುವರು.
ಹೊಸ ವರ್ಷದ ಅಂಗವಾಗಿ ಶ್ರೀ ಶಂಕರ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಕೀ ಬೋರ್ಡ್ ವಾದನ ವಿಶೇಷ ಗಾಯನ. ಕಲಾಶ್ರೀ ವಿದ್ಯಾಶಂಕರ್ ಮತ್ತು ತಂಡ. ಹಾಗೂ ಗಿಟಾರ್ ವಾದನ ಕಾರ್ಯಕ್ರಮವನ್ನು ಖ್ಯಾತ ಯುವ ಗಿಟಾರ್ ವಾದಕ. ಸಿ.ದೇವರಾಜ್ ಮತ್ತು ತಂಡದವರಿಂದ ಏರ್ಪಡಿಸಲಾಗಿದೆ ಎಂದು ವೇದಿಕೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ಕಲಾಶ್ರೀ ವಿದ್ಯಾಶಂಕರ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ