ಅಂದು ಸಾಕಾಗ್ತಿತ್ತು ಬರೀ
ಉಪ್ಪು ಗಂಜಿ ನೀರು
ಇಂದು ತಿನ್ನದೇ ಇರೋಕಾಗ್ತಿಲ್ಲ
ಪಿಜ್ಜಾ ಬರ್ಗಾರು
ಅಂದು ಕಡಲೆಕಾಯಿ, ಸೀಗೆಕಾಯಿ
ತಲೆಗೆ ಕೊಡುತ್ತಿತ್ತು ತಂಪು
ಜೊತೆಗೆ ಕೂದಲಿಗೆ ಹೊಳಪು
ಇಂದು ಬೇಕೇ ಬೇಕು ಯಾವುದಾದರೂ ಶಾಂಪು
ಅಂದು ಸಂಚಾರ ಕಾಲಲ್ಲೇ
ಎಷ್ಟಾದರೂ ಮೈಲು
ಇಂದು ಹೆಜ್ಜೆ ಹೆಜ್ಜೆಗೂ ಬೇಕು
ವೆಹಿಕಲ್ಲು
ಆರೋಗ್ಯವಿತ್ತು ಆವತ್ತು
ಆದ್ದರಿಂದ ಎಂತದಕ್ಕೂ
ಕ್ಷಣದಲ್ಲೇ ಸಜ್ಜು
ಇಂದು ಬಿಡುತ್ತಿಲ್ಲ , ಕಾರಣ ಇಷ್ಟೇ
ಇಂದಿನ ವೈಜ್ಞಾನಿಕ ಸಜ್ಜು
- ಅರ್ಪಿತಾ ಕುಂದರ್