ಅವಳ್ಯಾಕೋ ನಗುವುದ ಮರೆತು ಬಿಟ್ಟಳು‌‌‌‌‌‌.....

Arpitha
0
ಬಾಲ್ಯದ ದಿನದಿ ಲೆಕ್ಕಕ್ಕಿಲ್ಲದ ನಗು
ಹರೆಯದ ಮೊಗದಿ ಲೆಕ್ಕಗೊಂದಿಷ್ಟು ನಗು

ಮಗು ಮನಸ ಆಕೆಯಲ್ಲು ಮೂಡಿಹ ಮಂದಹಾಸ

ಸತಿ ಪತಿಯ ಕಲಹದೊಳು ಕಳೆದೋಯ್ತು ನಗುವೆಂಬ ಸಂತಸ

ಇಬ್ಬರು ಮೂವರಾದಾಗ ಮತ್ತೆ ಅರಳಿತು 
ನಗು ಸಲ್ಲಾಪದಿ ನಯನ
ಇದೀಗ ಖುಷಿಯ ಸಿಹಿ ಸಮ್ಮಿಲನ

ಕಾಲಾವಂತಾರ ಗಾತ್ರಗೊಂದಿಷ್ಟು ನಗು
ತಂದೆಯ ಕಳಕ್ಕೊಂಡ ಮುಗ್ದ ಮಗು

ಅಳುವ ಬದಿಗಿಟ್ಟು ನಗಲೆತ್ನಿಸುವ ಅವಳು
ಅದ್ಯಾಕೋ ಕಣ್ಣೀರ ಸಂಗಾತಿಯಾದಳು

ಭಾವ ತೀವ್ರತೆಯೊಳು ಕರಗಿ ಹೋದಳಾಕೆ
ವಿಧವೆಯಾದ ಬಾಳು ದಿಕ್ಕಿಲ್ಲದ ನೌಕೆ

 ಎಂಬತ್ತರ ಹರೆಯದ ತರುಣಿ ಇವಳು
ನಗುವ ಪರಿಧಿಯೊಳು ಅಳುವ ಅಡಗಿಸಿಹಳು

ಎಲ್ಲವನು ಸೋತು ಸೊರಗಿದವಳು
ಅವಳ್ಯಾಕೋ ನಗುವ ಮರೆತು ಬಿಟ್ಟಳು

 - ಅರ್ಪಿತಾ ಕುಂದರ್

        ‌‌‌‌‌           



‌‌
Tags

Post a Comment

0 Comments
Post a Comment (0)
To Top