ಬೆಂಗಳೂರು: ಪತ್ರಕರ್ತ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಸದಾಶಿವನಗರ ಪೋಲೀಸರು ಬಂಧಿಸಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಬಂಧಿತರ ಹಾಗೂ ಕೀರ್ತಿ ನಡುವೆ ಜಗಳ ಉಂಟಾಗಿದೆ. ಕಿರಿಕ್ ಕೀರ್ತಿ ವರ್ತನೆ ಗಲಾಟೆಗೆ ಕಾರಣ ಆಗಿದ್ದು ಹಲ್ಲೆ ಮಾಡಿದ ಐವರನ್ನು ಬಂಧಿಸಲಾಗಿದೆ.
ಅನಿಲ್, ವಿಜಯ್, ಅಜಯ್ ಸೇರಿದಂತೆ ಬಂಧಿತ ಐವರನ್ನು ಪೋಲೀಸರು ಬಂಧಿಸಿದ್ದಾರೆ. ಇವರು ಡಿಸೆಂಬರ್ 2 ರಂದು ಮದ್ಯಪಾನ ಮಾಡುತ್ತಿರುವಾಗ ಅನಾವಶ್ಯಕ ವಿಷಯಕ್ಕೆ ಮಾತು ಬೆಳೆದು ಗಲಾಟೆ ಆಗಿತ್ತು. ಈ ಗಲಾಟೆ ಅತಿರೇಕಕ್ಕೆ ಹೋಗಿ ಬೀರ್ ಬಾಟಲಿನಿಂದ ಕಿರಿಕ್ ಕೀರ್ತಿ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು.