ತೃತೀಯ ಲಿಂಗಿಗಳಿಗೂ ಪೊಲೀಸ್ ಇಲಾಖೆಯಲ್ಲಿ ಹುದ್ದೆಗೆ ಅವಕಾಶ

Arpitha
0
ಬೆಂಗಳೂರು: ಕರ್ನಾಟಕದಲ್ಲಿ ತೃತೀಯ ಲಿಂಗಿಗಳಿಗೆ ಸುವರ್ಣಾವಕಾಶ ಲಭಿಸಿದೆ. ಇನ್ನು ಮುಂದೆ ಅವರ ಕನಸೂ ನನಸಾಗುತ್ತಿದೆ. ಹೌದು. ಕರ್ನಾಟಕ ಪೊಲೀಸ್ ಇಲಾಖೆ ಇನ್ನು ಮುಂದೆ ಇವರಿಗೆ ಉದ್ಯೋಗವಕಾಶ ನೀಡಲು ನಿರ್ಧಾರ ಕೈಗೊಂಡಿದೆ.

ದೇಶದಲ್ಲೇ ಪ್ರಥಮ ಬಾರಿ ಮಂಗಳಮುಖಿಯರಿಗೆ ಕರ್ನಾಟಕ ಪೊಲೀಸ್ ಇಲಾಖೆ ಉದ್ಯೋಗ ನೀಡಲು ಎದುರಾಗಿದೆ. ಒಟ್ಟು 70 ಹುದ್ದೆಗಳು ಖಾಲಿ ಇದ್ದು ಈ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸಬಹುದು.

ಇತ್ತೀಚೆಗೆ ತೃತೀಯ ಲಿಂಗಿಗಳಿಗೆ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶ ನೀಡಲಾಗುತ್ತಿದೆ. ಇದೀಗ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವ ತೃತೀಯ ಲಿಂಗಿಗಳಿಗೆ ಕೂಡ ಇಲಾಖೆ ಶುಭಸುದ್ದಿ ನೀಡಿದೆ.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top