ಕೋಪಕ್ಕೆ ಕೊಂಚ ವಿರಾಮವಿರಲಿ

Arpitha
0
ಮನುಷ್ಯನಿಗೆ ಇರುವ ನಗು, ಅಳು, ಬೇಸರ ಮುಂತಾದ ಗುಣಗಳಲ್ಲಿ ಕೋಪ ಕೂಡ ಒಂದು.ಕೆಲವರ  ಕೋಪ ಕೆಲವೊಮ್ಮೆ ಪಶ್ಚಾತ್ತಾಪದಲ್ಲೂ ಕೊನೆಯಾಗುವುದಿಲ್ಲ. ಹಲವರು ಇದ್ದಾರೆ ಬಿಡಿ ಎದುರಿರುವವ ಕೋಪದಲ್ಲಿ ವರ್ತಿಸುತ್ತಿದ್ದರೆ ನೋಡಿ ಬಾಯಿ ಸುಮ್ಮನಿರುವುದೇ? ' ನಿಂಗೆ ಕೋಪ ಜಾಸ್ತಿ ಎನ್ನುವ ಬದಲು ನಗುತ್ತಾ ನಿಂಗೆ ಸ್ವಲ್ಪ ತಾಳ್ಮೆ ಕಡಿಮೆ ಅಲ್ವಾ' ಎನ್ನುತ್ತಾರೆ. ಕೋಪ ದುರ್ಗುಣಗಳ ನಾಯಕ. ನಮ್ಮ ಜೀವನದ ವೈರಿಯೂ ಹೌದು.

ಕೋಪ ಅನೇಕರಿಗೆ ಬೇರೆ ಬೇರೆ ರೀತಿಯಾಗಿ ಬರುತ್ತದೆ. ತನ್ನ ವಾದ ಗೆಲ್ಲದಿದ್ದಲ್ಲಿ ಕೋಪ, ಇತರರು ತನ್ನ ಮಾತು ಕೇಳದಿದ್ದಲ್ಲಿ ಕೋಪ, ತಪ್ಪಾಯಿತೆಂದು ಕೋಪ. ಒಟ್ಟಾರೆ ಮನೆಯಿಂದ ಹಿಡಿದು ಕೆಲಸ ಮಾಡುವ ಜಾಗದಲ್ಲೂ ಕೋಪ ಉದ್ಭವಿಸುವ ಸಂದರ್ಭ ಇರುತ್ತದೆ.

ಕೆಲವರು ಕೋಪ ಬಂದರೆ ಮೌನಿಗಳಾಗುತ್ತಾರೆ. ಇನ್ನೂ ಕೆಲವರು ತುಚ್ಛ ಪದದಲ್ಲಿ ನಿಂದಿಸಿ ಕೋಪಕ್ಕೋ ಅವರಿಗೋ ಹೇಗೋ ಸಮಾಧಾನ ಪಡಿಸಿಕೊಳ್ಳುತ್ತಾರೆ. ಇನ್ನೂ ಕೆಲವರಿರುತ್ತಾರೆ ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಮಾಡಿ ಕೋಪವನ್ನು ಪ್ರದರ್ಶಿಸುತ್ತಾರೆ. ಅವರ ಕೋಪ ಎಷ್ಟು ದುಬಾರಿ ನೋಡಿ.....

ಕೋಪ ಮನುಷ್ಯನ ಸ್ವಾಭಾವಿಕ ಗುಣ ಇರಬಹುದು. ಆದರೆ ಸ್ವಭಾವವೇ ಒರಟಾಗುವ ಕೆಟ್ಟ ಕೋಪ ವ್ಯಕ್ತಿತ್ವಕ್ಕೆ ಶೋಭೆ ಅಲ್ಲ ಅಲ್ಲವೇ....? ಮನಸ್ಸು ನಿಯಂತ್ರಿಸಿದರೂ ಕೆಲವೊಮ್ಮೆ ಅದು ಕಂಟ್ರೋಲ್ ಆಗಲ್ಲ ಅಂತಾರೆ. ಹಾಗಾದರೆ ' ಜಗಳ' ಎಂಬ ಮಾಧ್ಯಮವೇ ಕೋಪದ ಶಮನಕ್ಕೆ ಮದ್ದೇ.....?

ಒಟ್ಟಾರೆಯಾಗಿ ಕೋಪ ಎಂಬುವುದು ನಿಯಂತ್ರಣದಲ್ಲಿ ಇಲ್ಲವಾದರೆ ನಾವು ಅದರ ಗುಲಾಮರಾಗುವುದು ಮಾತ್ರ ಸತ್ಯ. ಕೊಂಚ ಕೋಪ ಕಡಿಮೆ ಆದರೆ ನಗುವಿಗೆ ಬೆಲೆ ಹೆಚ್ಚುತ್ತಲ್ಲವೇ......ಸದಾ ನಗುತ್ತಿರೋಣ


- ಅರ್ಪಿತಾ ಕುಂದರ್

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top