ಚಾರ್ಮಾಡಿ ಘಾಟಿಯಲ್ಲಿ ಕೆಂಪು ಬಸ್ ಸೇರಿದಂತೆ ವಾಹನ ಸಂಚಾರಕ್ಕೆ ಅವಕಾಶ

Arpitha
0
ಚಾರ್ಮಾಡಿ: ಸುಮಾರು 26 ತಿಂಗಳುಗಳ ಬಳಿಕ ದ.ಕನ್ನಡ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯ ಚಾರ್ಮಾಡಿ ಘಾಟಿಯಲ್ಲಿ ದಿನದ 24 ಗಂಟೆಯೂ ಕೆಎಸ್ಆರ್ಟಿಸಿ ಬಸ್, ಲಾರಿ ಸೇರಿದಂತೆ ನಿಗದಿಪಡಿಸಿದ ವಾಹನಗಳಿಗೆ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

2019 ರ ಸಪ್ಟೆಂಬರ್ ನಲ್ಲಿ ಮಳೆ ಹಾಗೂ ಭೀಕರ ಪ್ರವಾಹದಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಹಲವು ತಿಂಗಳುಗಳ ಕಾಲ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಇದೀಗ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರೂ ಅಧಿಕ ಭಾರ ಹೊರುವ ವಾಹನ, ರಾಜಹಂಸ ಬಸ್‌ಗಳ ಸಂಚಾರಕ್ಕೆ ನಿಷೇಧ ಹೇರಿದೆ.

ಇದೀಗ ಡಿಸೆಂಬರ್ 18 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಬಸ್, ಲಾರಿ ಮತ್ತು ಇತರ ವಾಹನಗಳಿಗೆ ದಿನದ 24 ಗಂಟೆ ಸಂಚಾರಕ್ಕೆ ಆಸ್ಪದ ನೀಡಿರುವುದು ಹೆಚ್ಚಿನ ಅನುಕೂಲ ನೀಡಿದೆ.

Post a Comment

0 Comments
Post a Comment (0)
To Top