|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ

ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ

 

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇದರ ಪರಿಸರ ಸಂಘ ಇತ್ತೀಚೆಗೆ ಕಾಲೇಜು ಆವರಣದಲ್ಲಿ ಇಂಧನ ಲೆಕ್ಕ ಪರಿಶೋಧನೆ (ಎನರ್ಜಿ ಅಡಿಟಿಂಗ್‌) ಮೂಲಕ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಆಚರಿಸಿತು.


ವಿದ್ಯುತ್ ಮೂಲಗಳು ಮತ್ತು ಬಳಕೆಯಲ್ಲಿರುವ ಉಪಕರಣಗಳ ಲೆಕ್ಕಪರಿಶೋಧನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಸಂಘದ ಉಪನಿರ್ದೇಶಕ ಡಾ.ಸಿದ್ದರಾಜು ಎಂ.ಎನ್, ಇಂಧನ ಸಂರಕ್ಷಣೆಯ ಮಹತ್ವ, ಇಂಧನ ಲೆಕ್ಕ ಪರಿಶೋಧನೆಯ ಪರಿಕಲ್ಪನೆ, ಶಾಲಾ-ಕಾಲೇಜುಗಳಲ್ಲಿ ಇದರ ನಿರ್ವಹಣೆ ಕುರಿತು ವಿವರಿಸಿದರು.


ಸಂಘದ ಸದಸ್ಯರಾದ ಚೇತನ್, ಹೇಮಂತ್, ಮೆಲ್ರೀನ್, ಅಫ್ರಾ ಮತ್ತು ಬಸಮ್ಮ ನೇತೃತ್ವದಲ್ಲಿ ವಿದ್ಯಾರ್ಥಿಗಳ ಗುಂಪು ಕಾಲೇಜಿನ ಸೈನ್ಸ್ ಬ್ಲಾಕ್‌ನಲ್ಲಿ ಬಳಸಲಾಗುವ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರಿಶೀಲಿಸಿತು. ಪ್ರಯೋಗಾಲಯ ಉಪಕರಣಗಳು, ರೆಫ್ರಿಜರೇಟರ್‌ಗಳು, ವಾಟರ್ ಕೂಲರ್‌ಗಳು, ಸೀಲಿಂಗ್ ಫ್ಯಾನ್‌ಗಳು, ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳು ಮುಂತಾದ ಉಪಕರಣಗಳು ಬಳಸುವ ಇಂಧನದ ಮಾಹಿತಿ ಕಲೆಹಾಕಲಾಯಿತು.


ನಂತರ ನಡೆದ ವೆಬಿನಾರ್‌ನಲ್ಲಿ ವಿದ್ಯಾರ್ಥಿಗಳು ಮಾನವನ ಆರೋಗ್ಯದ ಮೇಲೆ ಕೃತಕ ದೀಪಗಳ ಪ್ರಭಾವ ಮತ್ತು ಇಂಧನ ಸಂರಕ್ಷಣೆ ಕುರಿತು ಚರ್ಚಿಸಿದರು. ಪ್ರಕಾಶಮಾನ ಬಲ್ಬ್‌ಗಳ ಬಳಕೆ ತಲೆನೋವು, ಒತ್ತಡ, ರಕ್ತದೊತ್ತಡ, ಆಯಾಸವನ್ನು ಉಂಟುಮಾಡುತ್ತದೆ, ಅದೇ ನೈಸರ್ಗಿಕ ಬೆಳಕಿನಲ್ಲಿ ಕೆಲಸ ಮಾಡುವುದರಿಂದ ಕೆಲಸದ ದಕ್ಷತೆ ಹೆಚ್ಚುತ್ತದೆ ಮತ್ತು ಶಕ್ತಿಯ ಬಳಕೆ ಕಡಿಮೆಯಾಗುತ್ತದೆ, ಎಂಬಂತ ಕುತೂಹಲಕರ ಮಾಹಿತಿಯನ್ನು ಹಂಚಿಕೊಂಡರು.


ವೇದಾಶಿನಿ ಕಾರ್ಯಕ್ರಮ ನಿರೂಪಿಸಿದರು, ಅಫ್ರಾ ಸ್ವಾಗತಿಸಿದರು, ದೀಪ್ತಿ ಮತ್ತು ಹೇಮಂತ್ ಇಂಧನ ಸಂರಕ್ಷಣೆ ಕುರಿತು ಮಾತನಾಡಿದರು ಮತ್ತು ಫೈಝಲ್ ವಂದಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم