|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಾಡುಗಾರರಿಗೆ ಪ್ರತಿಭೆ ಪ್ರದರ್ಶಿಸಲು ಮುಳಿಯ ಜ್ಯುವೆಲ್ಸ್ ನೀಡುತ್ತಿದೆ ಸುವರ್ಣಾವಕಾಶ

ಹಾಡುಗಾರರಿಗೆ ಪ್ರತಿಭೆ ಪ್ರದರ್ಶಿಸಲು ಮುಳಿಯ ಜ್ಯುವೆಲ್ಸ್ ನೀಡುತ್ತಿದೆ ಸುವರ್ಣಾವಕಾಶ

 

ಪುತ್ತೂರು: ನೀವು ಹಾಡುಗಾರರೇ...? ಅವಕಾಶಕ್ಕಾಗಿ ಹಂಬಲಿಸುತ್ತಿರುವಿರಾ..‌? ಹಾಗಿದ್ದರೆ ಇಲ್ಲಿದೆ ನಿಮ್ಮ ಗಾಯನ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ. ಪುತ್ತೂರಿನ ಪ್ರಸಿದ್ಧ ಆಭರಣ ಸಂಸ್ಥೆ ಮುಳಿಯ ಜ್ಯುವೆಲ್ಸ್ 'ಮುಳಿಯ ಗಾನರಥ' ಚತುರ್ಥ ಆಡಿಷನ್ ರೌಂಡ್ ನಡೆಸುತ್ತಿದೆ. ಈ ಮೂಲಕ 'ಕರೋಕೆ ಹಾಡುಗಳ ಗಾಯನ ಸ್ಪರ್ಧೆ'ಯನ್ನು ಆಯೋಜಿಸಿ ಗಾಯಕರನ್ನು ಪ್ರೋತ್ಸಾಹಿಸುತ್ತಿದೆ.


ಈ ಸ್ಪರ್ಧೆಯಲ್ಲಿ ಎರಡು ವಿಭಾಗಗಳಿವೆ. 12 - 21 ವಯೋಮಿತಿಯವರ ವಿಭಾಗ ಹಾಗೂ 21 ವರ್ಷ ಮೇಲ್ಪಟ್ಟವರನ್ನು ಸಾರ್ವಜನಿಕ ವಿಭಾಗ ಎಂಬುದಾಗಿ ಪರಿಗಣಿಸಲಾಗುವುದು. ತುಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯ ಹಾಡುಗಳಿಗೆ ಅವಕಾಶ ನೀಡಲಾಗಿದೆ.


2022 ಜನವರಿ 01ರಂದು ಸಂಜೆ 5:00 ಗಂಟೆಗೆ ಸರಿಯಾಗಿ ಕಡಬದ ಸಿ.ಎ ಬ್ಯಾಂಕ್ ಹೊರಾಂಗಣದಲ್ಲಿ ಆಡಿಷನ್ ನಡೆಯಲಿದೆ. ಆಡಿಷನ್ ನೋಂದಣಿಗಾಗಿ 9743175916 ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ನ ಫೇಸ್ಬುಕ್ ಅಕೌಂಟ್ ಮುಖಾಂತರ ವೀಕ್ಷಿಸಬಹುದು.


'ಮುಳಿಯ ಗಾಯನ ರಥ' ಇದೊಂದು ಪುತ್ತೂರು ತಾಲೂಕಿನ ಗಾಯಕ - ಗಾಯಕಿಯರಿಗೆ ವೇದಿಕೆ ಸೃಷ್ಟಿ ಮಾಡುವ ಅಪೂರ್ವ ಕಾರ್ಯಕ್ರಮ.


ಸ್ಪರ್ಧಾ ನಿಬಂಧನೆಗಳು


1. ವಯೋಮಿತಿ ಆಧಾರಕ್ಕಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯ.


2. ಪ್ರೇಕ್ಷಕರಿಗೆ ಕಾರ್ಯಕ್ರಮವನ್ನು ವೀಕ್ಷಿಸಲು ಆನ್‌ಲೈನ್ ನಲ್ಲಿ ವ್ಯವಸ್ಥೆ ಮಾಡಲಾಗುವುದು.


3. ಕರೋಕೆ ಗಾಯನದಲ್ಲಿ ಹಾಡುವಾಗ ಎಲ್ಲಿಯೂ ಕರೋಕೆ ತಪ್ಪು ಮಾಡದೇ ಹಾಡುವುದು.


4. ಕರೋಕೆ ಗಾಯನ ಹಾಡುವವರು ಕರೋಕೆ ಇರುವ ಶೃತಿಯಲ್ಲಿ ಹಾಡಬೇಕು.


5. ಕರೋಕೆ ಗಾಯನದಲ್ಲಿ ತಾಳಬದ್ಧವಾಗಿ ಹಾಡಬೇಕು, ಸಾಹಿತ್ಯ ತಪ್ಪಾಗಿ ಇರಬಾರದು.


6. ಗೀತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು.


7. ಚಿಕ್ಕಮಕ್ಕಳೊಂದಿಗೆ ಪೋಷಕರು ಹಾಜರಿರತಕ್ಕದ್ದು.


8, ವಯೋಮಿತಿ 12 ವಯಸ್ಸಿನಿಂದ 21 ವಯಸ್ಸಿನವರೆಗೆ ಹಾಗೂ ಮೇಲ್ಪಟ್ಟ ವಯಸ್ಸಿನವರನ್ನು ಸಾರ್ವಜನಿಕ ವಿಭಾಗವೆಂದು 2 ವಿಭಾಗ ಮಾಡಲಾಗುವುದು.


9. ಆಡಿಷನ್‌ನಲ್ಲಿ 50 ಸ್ಪರ್ಧಿಗಳು ಮೇಲ್ಪಟ್ಟು ಇದ್ದಲ್ಲಿ ಹಾಡಿನ ಪಲ್ಲವಿ ಹಾಗೂ ಪ್ರಥಮ ಚರಣ ಮಾತ್ರ ಹಾಡಲು ಅವಕಾಶ.


10. ಕರೋಕೆ ಹಾಡುವ ಸ್ಪರ್ಧಿಗಳು ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ಚಲನಚಿತ್ರದಿಂದ ಆಯ್ದ ಹಾಡುಗಳಿಗೆ ಹಾಡಲು ಅವಕಾಶ ಇರುತ್ತದೆ.


11. ಆಡಿಷನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.


12. ಆಡಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧಿಗಳಲ್ಲಿ ಆಯ್ಕೆಯಾದವರಿಗೆ ಸೆಮಿ ಫಿನಾಲೆ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ.


13. ಗ್ರಾಂಡ್ ಫಿನಾಲೆಯ ವಿಜೇತರನ್ನು 'ಪುತ್ತೂರು ಮುಳಿಯ ಗಾನ ಕೋಗಿಲೆ' ಎಂಬ ಬಿರುದು ನೀಡಿ ಪುರಸ್ಕರಿಸಲಾಗುವುದು.


14. ನುರಿತ ಹಿನ್ನೆಲೆ ಸಂಗೀತ ತೀರ್ಪುಗಾರರು ಹಾಗೂ ಸಂಸ್ಥೆಯ ತೀರ್ಮಾನವೇ ಅಂತಿಮ.


15. ಕೋವಿಡ್ ನಿಯಮವನ್ನು ಪಾಲಿಸುವಲ್ಲಿ ಎಲ್ಲರೂ ಸಹಕರಿಸತಕ್ಕದ್ದು.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:


9743175916

9844602916


ಕಾರ್ಯಕ್ರಮ ಸಂಯೋಜಕರು


ಪ್ರವೀಣ್ | ಆನಂದ ಕುಲಾಲ್ 

ಮುಳಿಯ ಜ್ಯುವೆಲ್ಸ್, ಪುತ್ತೂರು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post