ಕಂಪ್ಯೂಟರ್ ಇಲ್ಲದ ಜಗತ್ತು ಅಸಾಧ್ಯ: ಪುನೀತ್ ಕೆ ಎಸ್

Upayuktha
0

 

ಪುತ್ತೂರು: ಈಗಿನ ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಕಂಪ್ಯೂಟರ್ ಇಲ್ಲದ ಜೀವನವನ್ನು ಊಹಿಸಲೂ ಅಸಾಧ್ಯ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕಂಪ್ಯೂಟರ್ ಸಹಾಯಕ ಪುನೀತ್ ಕೆ. ಎಸ್. ಅವರು ಹೇಳಿದರು.


ಅವರು ವಿವೇಕಾನಂದ ಕಾಲೇಜು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ತೃತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಯೋಜಿಸಿದ ಮಣಿಕರ್ಣಿಕ ಮಾತುಗಾರರ ವೇದಿಕೆಗೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ ಗುರುವಾರ ಮಾತನಾಡಿದರು.


ಈಗಿನ ಜಗತ್ತಿನಲ್ಲಿ ಕಂಪ್ಯೂಟರ್‌ಗೆ ಬದಲಾಗಿ ಮೊಬೈಲ್ ಇದ್ದರೂ ಕೂಡ, ಕಂಪ್ಯೂಟರ್ ತನ್ನದೇ ಆದ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ. ಇಂದಿನ ದಿನಗಳಲ್ಲಿ ತಂತ್ರಜ್ಞಾನದ ಬಳಕೆಯಿಲ್ಲದೆ ಜೀವನ ಅಸಾಧ್ಯ. ಏಕೆಂದರೆ ಯಾವುದೇ ಒಂದು ಮಾಧ್ಯಮ ಅಥವಾ ಇನ್ನಿತರ ಕಾರ್ಯಗಳು ತಂತ್ರಜ್ಞಾನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ವಿದ್ಯಾರ್ಥಿಗಳಾದ ದೀಕ್ಷಿತ, ಪ್ರತಿಕ್ಷಾ ಪೂಜಾರಿ, ನಮನ್ ಶೆಟ್ಟಿ, ಚೈತನ್ಯ ಲಕ್ಷ್ಮಿ, ವಿದ್ಯಾಲಕ್ಷ್ಮಿ, ಸಂದೀಪ್, ರಕ್ಷಿತಾ, ಮಂಜುನಾಥ್, ಕಾರ್ತಿಕ್ ಪೈ, ರಮ್ಯಾ ಇವರು ತಮ್ಮ ಕಂಪ್ಯೂಟರ್ ಬಳಕೆಯ ಅನುಭವಗಳನ್ನು ಹಂಚಿಕೊಂಡರು. ದ್ವಿತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿ ಮಂಜುನಾಥ್ ವಾರದ ಉತ್ತಮ ಮಾತುಗಾರರಾಗಿ ಹಾಗೂ ಪ್ರಥಮ ಬಿಎ ಪತ್ರಿಕೋದ್ಯಮ ತರಗತಿ ವಾರದ ಉತ್ತಮ ಮಾತುಗಾರರ ತಂಡ ಪ್ರಶಸ್ತಿಯನ್ನು ಪಡೆದುಕೊಂಡರು.


ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸೀಮಾ ಪೋನಡ್ಕ, ಕಾರ್ಯಕ್ರಮದ ಕಾರ್ಯದರ್ಶಿ ಕೃತಿಕಾ ಸದಾಶಿವ ಉಪಸ್ಥಿತರಿದ್ದರು. ತೃತೀಯ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ನಮಿತಾ ಸ್ವಾಗತಿಸಿ, ಸಂದೀಪ್ ಮಂಜಿಕಟ್ಟೆ ವಂದಿಸಿದರು. ಶ್ರೀರಾಮ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top