ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ

Upayuktha
0

 

ನಿಟ್ಟೆ: ಡಿ.6 ಹಾಗೂ 7 ರಂದು ನಿಟ್ಟೆ ಡಾ. ಎನ್.ಎಸ್.ಎ.ಎಮ್ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಕೂಟದ ಪುರುಷರ ವಿಭಾಗದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಆತಿಥೇಯ ಡಾ. ಎನ್ ಎಸ್ ಎ ಎಮ್ ಪ್ರಥಮ ದರ್ಜೆ ಕಾಲೇಜು, ನಿಟ್ಟೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.


ಪುರುಷರ ವಿಭಾಗದಲ್ಲಿ ಆತಿಥೇಯ ತಂಡ ಡಾ. ಎನ್ ಎಸ್ ಎ ಎಮ್ ಕಾಲೇಜಿನ ತಂಡ  ಹಾಗೂ ಮಹಿಳೆಯರ ವಿಭಾಗದಲ್ಲಿ ಮೂಡಬಿದ್ರೆಯ ಆಳ್ವಾಸ್ ತಂಡ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ ಸಂತ ಅಲೋಶಿಯಸ್ ತಂಡದ ರೋಹನ್, ಆತಿಥೇಯ ನಿಟ್ಟೆ ಕಾಲೇಜಿನ ಸಲ್ಮಾನ್ ಹಾಗೂ ಮಹಿಳೆಯರ ವಿಭಾಗದಲ್ಲಿ ಆತಿಥೇಯ ನಿಟ್ಟೆ ಕಾಲೇಜಿನ ಬಿಂದುಶ್ರೀ ಮತ್ತು ಆಳ್ವಾಸ್ ಕಾಲೇಜಿನ ಲಕ್ಷ್ಮೀ ವೈಯಕ್ತಿಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.


ಪಂದ್ಯಾಕೂಟದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾ ವೀಕ್ಷಕ ಅಧಿಕಾರಿ ಡಾ.ಜಾನ್ ಪಿಂಟೊ ಭಾಗವಹಿಸಿ ಕ್ರೀಡಾಪಟುಗಳನ್ನು ಅಭಿನಂದಿಸಿದರು.  ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ಡಾ. ಎನ್ ಎಸ್ ಎ ಎಮ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ವೀಣಾ ಕುಮಾರಿ ಬಿ ಕೆ ವಹಿಸಿದ್ದು, ನಿಟ್ಟೆ ವಿದ್ಯಾ ಸಂಸ್ಥೆಯ ಕ್ರೀಡಾ ಆಡಳಿತ ಅಧಿಕಾರಿ ಶ್ಯಾಮ್ ಸುಂದರ್, ಸಂಸ್ಥೆಯ ಬಾಸ್ಕೆಟ್ ಬಾಲ್ ತರಬೇತುದಾರ ರವಿಪ್ರಕಾಶ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ನಿತಿನ್ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು. ಸಮಾರಂಭವನ್ನು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಜೀವಿಕಾ ರಾನಿ ನಿರೂಪಿಸಿ, ಪ್ರಾಧ್ಯಾಪಕ ಸಚಿನ್ ಶೆಟ್ಟಿ ವಂದಿಸಿದರು.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top