|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾಳೆಗಾಗಿಯಲ್ಲ, ಇಂದು ಅನ್ನೋದನ್ನು ಜೀವಿಸೋಣ

ನಾಳೆಗಾಗಿಯಲ್ಲ, ಇಂದು ಅನ್ನೋದನ್ನು ಜೀವಿಸೋಣ


ಮನುಷ್ಯ ಹುಟ್ಟಿ ಸಾಯೋವರೆಗೂ ಸಂಪಾದನೆಯಲ್ಲೇ ನಿರತನಾಗಿ, ಕೆಲವೊಮ್ಮೆ ಅದೆಷ್ಟೋ ಸಣ್ಣ ಪುಟ್ಟ ಖುಷಿ ಸಂತೋಷವನ್ನು ತ್ಯಜಿಸುತ್ತಾನೆ. ಇನ್ನೂ ಕೆಲವೊಮ್ಮೆ ದುಡಿಮೆಗೆ ಕೊಡುವಷ್ಟು ಸಮಯವನ್ನು ತನ್ನ ಕುಟುಂಬಕ್ಕೆ ಕೊಡೋದಕ್ಕೂ ಯೋಚಿಸುತ್ತಾನೆ.


ಮನುಷ್ಯನ ಪಾಡು ಇಷ್ಟು ವಿಭಿನ್ನ ಯಾಕೆ ಹೇಳಿ. ಅವನು ನಾಳೆಯ ಬಗ್ಗೆ ಯೋಚಿಸುತ್ತಾನೆ. ತನ್ನ ಬದುಕಲ್ಲದೆ ಬರುವ ಮುಂದಿನ ಪೀಳಿಗೆಯ ಬಗ್ಗೆಯೂ ಚಿಂತಿಸುತ್ತಾನೆ. ಆಸೆಗಳ ಪೂರೈಸುವ ತುಡಿತ ಅವನನ್ನು ಸಂಪಾದನೆಗೆ ಒತ್ತು ಕೊಡುವಲ್ಲಿ ದೂಡಿ ಬಿಡುತ್ತದೆ.

ಅಪರಿಮಿತ ಬಯಕೆಗಳನ್ನು ಪರಿಮಿತ ಸಂಪನ್ಮೂಲಗಳಿಂದ ತೃಪ್ತಿ ಪಡಿಸಿಕೊಳ್ಳಲು ಆತ ಪಡುವ ಪಾಡಿದೆಯಲ್ವ ಅದು ಬಹುಶಃ ಪ್ರಾಣಿಗಳಿಗಿಲ್ಲ. ಏಕೆಂದರೆ ಅವುಗಳು ವಾಸ್ತವವನ್ನು ಜೀವಿಸುತ್ತದೆ. ಭೂತಕಾಲವನ್ನು ಮರೆಯುತ್ತದೆ. ಅದೇ ಮನುಷ್ಯ ನೋಡಿ ನಗುವುದನ್ನೂ ಮರೆತು ತನ್ನ ಬಿಝೀ ಶೆಡ್ಯೂಲ್ ಬಗ್ಗೆ ಮಾತ್ರ ಆಲೋಚಿಸುತ್ತಿರುತ್ತಾನೆ.

ಕೊರೋನಾ ನಂತರ ಅದೆಷ್ಟೋ ಸಾವು - ನೋವುಗಳ ಕಂಡು ಮನುಷ್ಯ ಬದಲಾಗುತ್ತಾನೆ ಎಂದುಕೊಂಡರೆ ಮತ್ತೆ ಕೂಡ ಹಣದಾಸೆಗೆ ತುಚ್ಛ ಮಟ್ಟಕ್ಕೂ ಇಳಿದುಬಿಡುವ ಚಾಳಿ ಆರಂಭಿಸಿಕೊಂಡಿದ್ದಾನೆ. 

ಎಲ್ಲ ಒತ್ತಟ್ಟಿಗಿಟ್ಟು ನಗುವುದನ್ನು ಮೊದಲು ಕಲಿಯೋಣ, ನಾಳೆ ಬಗ್ಗೆ ಯೋಚಿಸುತ್ತಿದ್ದರೆ 'ಇಂದು' ಅನ್ನೋದು ಅರಿವಿಲ್ಲದೆ ಮುಗಿದುಬಿಡುತ್ತದೆ. ಅದಕ್ಕಾಗಿ ಭವಿಷ್ಯದ ಬಗ್ಗೆ ಗಾಢವಾದ ಚಿಂತೆ ಬೇಡ. ಮನಸ್ಸು ಇಂದು ಅನ್ನೋದನ್ನು ಮೊದಲು ಜೀವಿಸಲಿ ಅಷ್ಟೇ... ಏನಂತೀರಾ..?

-ಅರ್ಪಿತಾ ಕುಂದರ್

0 Comments

Post a Comment

Post a Comment (0)

Previous Post Next Post