ಕವನ: ಗಣಪನಿಗೆ ಅಕ್ಷರ ಮಾಲೆ

Upayuktha
0



ಗ   ಣಪ ನಮ್ಮ ಮನೆಗೆ ಬರುವ

ಗಾ ಢವಾದ ಭಕುತಿಗೊಲಿದು 


ಗಿ   ರಿಜೆಯರಸ ಈಶನ ಸುತ 

ಗೀ  ತಪ್ರಿಯ ಗಣರಾಜನು 


ಗು  ಣಪೂರ್ಣನು ಒಲಿವ ಕ್ಷಣದಿ 

ಗೂ ಢತೆ ಇದೆ ಅವನುದರದಿ 


ಗೃ   ಹಸ್ಥನಾಗಿರದಿದ್ದರವನು

ಗೆ   ಳೆಯನಂತೆ ಸಹೃದಯನು 


ಗೇ  ಲಿ ಮಾಡೆ ಶಪಿಸಿ ಬಿಡುವ 

ಗೈ   ರತ್ತಿನ ಮುದ್ದು ಗಣಪ 


ಗೊ ನೆ ಬಾಳೆಯು ಇಷ್ಟ ನಿನಗೆ

ಗೌ  ರಮ್ಮನ ಮುದ್ದು ಮಗುವೆ 


ಗಂ  ತವ್ಯವ ತೋರಿಸುತ್ತ 

ಗಃ  ನ ಬಂಧದಿಂದ ಬಿಡಿಸು 

*********

-ಸಹಸ್ರಬುಧ್ಯೆ  ಮುಂಡಾಜೆ 


ಗೈರತ್ತು  =   ಸಾಮರ್ಥ್ಯ 

ಗಂತವ್ಯ =  ಸೇರಬೇಕಾದ ಸ್ಥಳ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top