|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದಿವ್ಯ ಕಾಶಿ- ಭವ್ಯ ಕಾಶಿ: ಪ್ರಧಾನಿ ಮೋದಿಯವರಿಂದ ಮಹತ್ವಾಕಾಂಕ್ಷೆಯ 'ಕಾಶಿ ವಿಶ್ವನಾಥ ಧಾಮ' ಲೋಕಾರ್ಪಣೆ

ದಿವ್ಯ ಕಾಶಿ- ಭವ್ಯ ಕಾಶಿ: ಪ್ರಧಾನಿ ಮೋದಿಯವರಿಂದ ಮಹತ್ವಾಕಾಂಕ್ಷೆಯ 'ಕಾಶಿ ವಿಶ್ವನಾಥ ಧಾಮ' ಲೋಕಾರ್ಪಣೆ

ವಾರಣಾಸಿ: ಇಂದು ಮಧ್ಯಾಹ್ನ ಎಂದರೆ ಡಿ.13 ರಂದು ವಾರಣಾಸಿಯ ಪುರಾತನ ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾನದಿ ಘಟ್ಟಗಳಿಗೆ ಸಂಪರ್ಕಿಸುವ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.


ಪ್ರಧಾನಮಂತ್ರಿಯವರ ಕನಸಿನ ಯೋಜನೆ ಎಂದು ಹೇಳಲಾದ ಈ ಕಾರಿಡಾರ್ ಅನ್ನು 5,000 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಆಧ್ಯಾತ್ಮಿಕ ಕೇಂದ್ರದ "ಕಳೆದುಹೋದ ವೈಭವವನ್ನು" ಮರುಸ್ಥಾಪಿಸುವ ಉದ್ದೇಶದಿಂದ 2019 ರ ಮಾರ್ಚ್‌ನಲ್ಲಿ ತಮ್ಮ ಸಂಸದೀಯ ಕ್ಷೇತ್ರದಲ್ಲಿ ಪ್ರಧಾನ ಮಂತ್ರಿಯವರು 800 ಕೋಟಿ ರೂ. ಯೋಜನೆಯನ್ನು ಪ್ರಾರಂಭಿಸಿದರು.




ವಾರಣಾಸಿಯಲ್ಲಿನ ಮೂಲಸೌಕರ್ಯಗಳ ಸುಧಾರಣೆಯು ಬೌದ್ಧ ಯಾತ್ರಾಸ್ಥಳವಾದ ಸಾರನಾಥ ಸೇರಿದಂತೆ ಪವಿತ್ರ ನಗರ ಮತ್ತು ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಇದು ಉತ್ತೇಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.


ಕಾಶಿ ವಿಶ್ವನಾಥ ಸಂಕೀರ್ಣವನ್ನು ಪುನರುಜ್ಜೀವನಗೊಳಿಸುವ ಮತ್ತು ಪುನರಾಭಿವೃದ್ಧಿ ಮಾಡುವ ಪ್ರಯತ್ನವು ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಪುರಾತನ ಭೂಮಿಯು ತನ್ನ ಪ್ರಾಚೀನ ವೈಭವವನ್ನು ಕಂಡುಕೊಳ್ಳುವ ಮತ್ತು ಆಚರಿಸುವ ಪ್ರಯತ್ನಗಳ ಯಶಸ್ವಿ ಫಲವನ್ನು ರಾಷ್ಟ್ರ ನಿರ್ಮಾಣ ಯೋಜನೆಗಳೆಂದು ಪ್ರಧಾನಿ ನರೇಂದ್ರ ಮೋದಿಯವರು ಬಲವಾಗಿ ನಂಬಿ ಸಾಗುತ್ತಿದ್ದಾರೆ. 

ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟನಾ ಸಮಾರಂಭದ ಪೂರ್ಣ ದೃಶ್ಯಾವಳಿಗಳನ್ನು ಈ ವೀಡಯೋದಲ್ಲಿ ನೋಡಿ... 




(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم