|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರೈತ ಕುಟುಂಬದ ಮಕ್ಕಳಿಗೂ ವಿದ್ಯಾನಿಧಿ : ನಿಯಮ ಸಡಿಲಗೊಳಿಸಿದ ಸರ್ಕಾರ

ರೈತ ಕುಟುಂಬದ ಮಕ್ಕಳಿಗೂ ವಿದ್ಯಾನಿಧಿ : ನಿಯಮ ಸಡಿಲಗೊಳಿಸಿದ ಸರ್ಕಾರ

ಬೆಂಗಳೂರು: ' ರೈತ ವಿದ್ಯಾನಿಧಿ' ಯೋಜನೆಯನ್ನು ಜಾರಿಗೊಳಿಸಿದ ಸರ್ಕಾರ ಈ ಯೋಜನೆಯನ್ನು ಮತ್ತಷ್ಟು ಸರಳಗೊಳಿಸಿ ರೈತಕುಟುಂಬದ ಎಲ್ಲಾ ಮಕ್ಕಳಿಗೂ ಈ ಯೋಜನೆಯ ಪ್ರಯೋಜನ ದಕ್ಕುವಂತೆ ಆದೇಶಿಸಿದೆ.

ರೈತ ಮಕ್ಕಳಿಗಷ್ಟೇ ಮೊದಲು ವಿದ್ಯಾ ನಿಧಿ ಘೋಷಿಸಿದ್ದ ಸರ್ಕಾರ ಆ ಆದೇಶವನ್ನು ಮತ್ತೆ ಸಡಿಲಗೊಳಿಸಿ ರೈತ ಕುಟುಂಬದ ಎಲ್ಲಾ ಮಕ್ಕಳು ಇದರ ಫಲಾನುಭವಿಗಳಾಗಲಿದ್ದಾರೆ. 

ಈ ಮೊದಲು ರಾಜ್ಯ ಸರ್ಕಾರದ ಯಾವುದೇ ಇಲಾಖೆಯಿಂದ ವಿದ್ಯಾರ್ಥಿ ವೇತನ ಪಡೆದಿದ್ದರೂ / ಪಡೆಯದಿದ್ದರೂ ಅರ್ಜಿ ಸಲ್ಲಿಸಿದರೆ ರೈತವಿದ್ಯಾನಿಧಿಗೆ ರೈತ ಕುಟುಂಬದ ಮಕ್ಕಳು ಅರ್ಹರೆಂದು ತಿಳಿಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಜಮೀನುಗಳು ಭಾಗಶಃ ಹಂಚಿಕೆಯಾಗದೆ ಉಳಿದಿದ್ದು ಮಕ್ಕಳು, ಮೊಮ್ಮಕ್ಕಳನ್ನು ರೈತ ಮಕ್ಕಳೆಂದು ಗುರುತಿಸುವುದು ಕಷ್ಟವಾಗಿತ್ತು ಆದ್ದರಿಂದ ಈ ಯೋಜನೆಯ ನಿಯಮವನ್ನು ಸ್ವಲ್ಪ ವಿಸ್ತೃತಗೊಳಿಸಿ ಆ ಕುಟುಂಬದಲ್ಲಿ ಕಲಿಯಿತ್ತಿರುವ ಎಲ್ಲಾ ಮಕ್ಕಳಿಗೂ ಪ್ರಯೋಜನ ದಕ್ಕುವಂತೆ ಸರ್ಕಾರ ಚಿಂತನೆ ನಡೆಸಿದೆ.

0 تعليقات

إرسال تعليق

Post a Comment (0)

أحدث أقدم