ಹತ್ತನೇ ತರಗತಿ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆ ರದ್ದು

Arpitha
0

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿತ್ತು. ಕಳೆದ ಬಾರಿ ಜಾರಿಗೊಳಿಸಿದ್ದ ಬಹುಆಯ್ಕೆ ಪ್ರಶ್ನೆಪತ್ರಿಕೆಯನ್ನು ರದ್ದುಗೊಳಿಸಿದ್ದು ಮತ್ತೆ ವಿಸ್ತೃತವಾಗಿ ಉತ್ತರಗಳನ್ನು ಬರೆಯುವ ಪ್ರಶ್ನೆಪತ್ರಿಕೆಯನ್ನೇ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ನೂತನ ನಿಯಮದಂತೆ ಪ್ರಥಮ ಭಾಷೆಯಲ್ಲಿ 125 ಅಂಕಗಳಿಗೆ ಮತ್ತು ಉಳಿದ ಭಾಷೆಗಳಿಗೆ 100 ಅಂಕದ ಪರೀಕ್ಷೆ ಇರಲಿದೆ ಎಂದು ಪ್ರೌಢಶಿಕ್ಷಣಾ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.

ಈ ಬಾರಿ ಪರೀಕ್ಷೆಗೆ ವಿದ್ಯಾರ್ಥಿಗಳು ಹದಿನೈದು ನಿಮಿಷ ತಡವಾಗಿ ಬಂದರೂ ಪರೀಕ್ಷೆ ಬರೆಯುವ ಅವಕಾಶವಿದೆ. ಕಳೆದ ವರ್ಷ ತಜ್ಞರ ಅಭಿಪ್ರಾಯ ಪಡೆದು ತಾತ್ಕಾಲಿಕವಾಗಿ ನಿಯಮಗಳನ್ನು ಅಳವಡಿಸಲಾಗಿತ್ತು. ಈ ವರ್ಷ ತರಗತಿಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಹಿಂದಿನಂತೆ ವಿಸ್ತೃತ ಉತ್ತರ ಬರೆಯುವ ಪ್ರಶ್ನೆಪತ್ರಿಕೆಗಳನ್ನೇ ನೀಡಲಾಗುತ್ತದೆ.

(ಉಪಯುಕ್ತ ನ್ಯೂಸ್)


Post a Comment

0 Comments
Post a Comment (0)
To Top