ಅನಿಲ ವಿತರಕರು ಹೆಚ್ಚುವರಿ ಹಣ ಕೇಳಿದರೆ ದೂರು ನೀಡಿ

Upayuktha
0

ಮಂಗಳೂರು: ಅಡುಗೆ ಅನಿಲವನ್ನು ಮನೆ ಮನೆಗೆ ಪೂರೈಸುವ ಸಂದರ್ಭದಲ್ಲಿ ಅನಿಲ ವಿತರಕರು ಗ್ರಾಹಕರಿಂದ ಹೆಚ್ಚಿನ ದರವನ್ನು ವಸೂಲಿ ಮಾಡಿದ್ದಲ್ಲಿ ದೂರು ಸಲ್ಲಿಸುವಂತೆ ಕೋರಲಾಗಿದೆ.


ಅನಿಲ ವಿತರಕರು ನಿಗದಿ ಪಡಿಸಿದ ದರಕ್ಕಿಂತ ಹೆಚ್ಚುವರಿ ದರವನ್ನು ವಸೂಲಿ ಮಾಡಿದಲ್ಲಿ ಸಹಾಯಕ ನಿರ್ದೇಶಕರು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ಈ ವಿಳಾಸಕ್ಕೆ ದೂರನ್ನು ಸಲ್ಲಿಸಬಹುದು.


ದೂರವಾಣಿ: 0824-2220571 ಸಂಪರ್ಕಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top