ಶನಿವಾರಸಂತೆಯಲ್ಲಿ ವಿಜಯ ದಿವಸ್ ಆಚರಣೆ

Upayuktha
0


ಮಡಿಕೇರಿ: ಹಿಂದು ಜಾಗರಣ ವೇದಿಕೆ ಕೊಡಗು ಜಿಲ್ಲೆ ಹಿಂದು ಯುವ ವಾಹಿನಿ ಸೋಮವಾರಪೇಟೆ ತಾಲ್ಲೂಕು ನೇತೃತ್ವದಲ್ಲಿ ಶನಿವಾರಸಂತೆಯಲ್ಲಿ ಇಂದು (ಡಿ.18) ವಿಜಯ ದಿವಸ (ಬಾಂಗ್ಲಾ ವಿಮೋಚನಾ ದಿನ) ಪ್ರಯುಕ್ತ ಬೈಕ್ ಮತ್ತು ವಾಹನ ಜಾಥಾ ನಡೆಸಲಾಯಿತು.


ಶನಿವಾರಸಂತೆಯ ಗೋಪಾಲಪುರದಿಂದ ಬೈಕ್ ಜಾಥಾ ಹೊರಟು ಬೆಂಗಳೂರು ಮಾರ್ಗವಾಗಿ ಕೊಡ್ಲಿಪೇಟೆ ಮೂಲಕ ಶನಿವಾರಸಂತೆಯ ಕೆ.ಆರ್.ಸಿ. ಸರ್ಕಲ್ ತಲುಪಿತು ನಂತರ ಕೆಆರ್‌ಸಿ ಸರ್ಕಲ್‌ನಲ್ಲಿ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸೈನಿಕ ಸಂಘದ ಅಧ್ಯಕ್ಷರಾದ ಮಹೇಶ್ ವಹಿಸಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


1971ರ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋಧರಾದ ಕಾಜುರು ಗ್ರಾಮದ ಎಂ.ಸ್ ಪೊನ್ನಪ್ಪ, ಎಂ.ಎಸ್ ಕಾಳಪ್ಪ, ಅಪ್ಪಾಜಿ, ಶನಿವಾರಸಂತೆಯ ಕಳಲೇ ಗ್ರಾಮದ ಕೆ.ವಿ ಮಂಜುನಾಥ್ ಮತ್ತು ಪುಟ್ಟಸ್ವಾಮಿ ಇವರನ್ನು ಸನ್ಮಾನಿಸಲಾಯಿತು.


ಸೇವಾ ಭಾರತಿ ಜಿಲ್ಲಾ ಅಧ್ಯಕ್ಷರಾದ ಟಿ.ಸಿ. ಚಂದ್ರನ್ ಕಾರ್ಯಕ್ರಮದ ಬೌದ್ಧಿಕ್ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸುಭಾಸ್ ತಿಮ್ಮಯ್ಯ ಸಹ ಸಂಪರ್ಕ ಪ್ರಮುಖ್ ಎಂ.ಬಿ ಉಮೇಶ್ ತಾಲ್ಲೂಕು ಅಧ್ಯಕ್ಷರಾದ ಸುನಿಲ್, ಉಪಾಧ್ಯಕ್ಷರಾದ ಸಂದೀಪ್ ಪ್ರಧಾನ ಕಾರ್ಯದರ್ಶಿ ಬೊಜೇಗೌಡ, ಕಾರ್ಯದರ್ಶಿ ಲೋಕೇಶ್ ಹಿಂದು ಯುವ ವಾಹಿನಿ ಜಿಲ್ಲಾ ಪ್ರಮುಖ್ ಚೇತನ್, ವಲಯ ಪ್ರಮುಖರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top