ಭಾಷಾ ಅಧ್ಯಯನಕಾರರಿಗೆ ಆಕರ ಕೋಶ: 'ಹವಿ-ಸವಿ ಕೋಶ' ಹವ್ಯಕ-ಕನ್ನಡ ನಿಘಂಟು

Upayuktha
0


ಕೃತಿ: ಹವಿ- ಸವಿ ಕೋಶ

ಪುಟಗಳು: 510

ಬೆಲೆ: 500

ಪ್ರಕಾಶಕರು: ಸೌಮ್ಯ ಪ್ರಕಾಶನ ಕುಳಮರ್ವ

ಲೇಖಕರು: ಶ್ರೀ ವಿ.ಬಿ. ಕುಳಮರ್ವ (9446484585)


ಕನ್ನಡದ ಉಪಭಾಷೆಗಳಲ್ಲಿ ತನ್ನದೇ ವೈಶಿಷ್ಟ್ಯಗಳಿಂದ ಮಹತ್ವದ ಸ್ಥಾನ ಗಳಿಸಿದ ಭಾಷೆ ಹವ್ಯಕ. ಸಮೃದ್ಧವಾದ ಸಂಸ್ಕೃತಿಯಲ್ಲಿ ಸ್ವಂತಿಕೆಯಿಂದ ಮೆರೆಯುತ್ತಿರುವ ಹವ್ಯಕ ಭಾಷೆಯ ಪದಕೋಶವೊಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾರಾಯಣ ಮಂಗಲದಲ್ಲಿರುವ ಸಾಹಿತಿ ಶ್ರೀ ವಿ.ಬಿ. ಕುಳಮರ್ವ ಅವರ ನಿವಾಸದಲ್ಲಿ ಲೋಕಾರ್ಪಣೆಗೊಂಡಿದೆ. ಕಾಸರಗೋಡಿನ ಹಿರಿಯ ವಿದ್ವಾಂಸರೂ, ನಿವೃತ್ತ ಅಧ್ಯಾಪಕರೂ, ಖ್ಯಾತ ಸಾಹಿತಿಗಳೂ ಆಗಿರುವ ಶ್ರೀ ವಿ.ಬಿ. ಕುಳಮರ್ವ ಅವರ ಹನ್ನೆರಡು ವರ್ಷಗಳ ನಿರಂತರ ಶ್ರಮ ಈ ನಿಘಂಟುವಿನ ಹಿಂದೆ ಇದೆ.


ಇತರ ಭಾಷೆಯ ಪದಗಳನ್ನು ಉಪಯೋಗಿಸುವ ಮೂಲಕ ತೆರೆಮರೆಗೆ ಸರಿದಿರುವ ಅನೇಕ ಹವ್ಯಕ ಪದಗಳು ಇಲ್ಲಿ ಉಲ್ಲೇಖಗೊಂಡಿವೆ. ಹವ್ಯಕ- ಕನ್ನಡ ಪದಕೋಶದಿಂದ ಹವ್ಯಕ ಭಾಷೆ ತಿಳಿಯದವರಿಗೂ ಭಾಷಾ ಪರಿಚಯವಾಗಲು ಸುಲಭ ಸಾಧ್ಯವಾಗಬಹುದು. ಈ ನಿಘಂಟು ಹವ್ಯಕ ಭಾಷೆ ಕಲಿಯುವವರಿಗೆ ದಾರಿದೀಪವಾಗಬಹುದು.

-ಪ್ರಸನ್ನಾ ವಿ ಚೆಕ್ಕೆಮನೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top