|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾಷಾ ಅಧ್ಯಯನಕಾರರಿಗೊಂದು ಚರಿತ್ರಾರ್ಹ ಆಕರ ಗ್ರಂಥ- ಹವಿ ಸವಿ ಕೋಶ

ಭಾಷಾ ಅಧ್ಯಯನಕಾರರಿಗೊಂದು ಚರಿತ್ರಾರ್ಹ ಆಕರ ಗ್ರಂಥ- ಹವಿ ಸವಿ ಕೋಶ

 



ಹವಿ ಸವಿ ಕೋಶ ಹೆಸರೇ ಸೂಚಿಸುವಂತೆ, ಹವ್ಯಕ ಭಾಷೆಯ ಅಂಗವಾಗಿದ್ದು ಇಂದು ಚರಿತ್ರೆಗೆ ಸೇರಿ ಹೋಗುವಂತಹ ಸಾವಿರಾರು ಶಬ್ದಗಳನ್ನು ಒಂದು ಗ್ರಂಥದಲ್ಲಿ ಸಂಗ್ರಹಿಸಿಡುವ ಮಹತ್ಕಾರ್ಯ ಶ್ಲಾಘನೀಯವೇ ಸರಿ. ಒಂದು ಭಾಷೆಯ ಸ್ವರೂಪವೇ ಬದಲಾಗಿ ಕಿಚಡಿಯಂತಾಗಿ ಭಾಷೆ ತನ್ನ ಮೂಲಸ್ವರೂಪವನ್ನೇ ಕಳೆದುಕೊಳ್ಳುವಂತಹ ಒಂದು ಸನ್ನಿವೇಶದಲ್ಲಿ, ಇಂದಿನ ತಲೆಮಾರು ಹಲವು ಶಬ್ದಗಳು ಹಲವು ಶಬ್ದಗಳ ಅರಿವನ್ನಾಗಲಿ, ತಿಳುವಳಿಕೆಯನ್ನಾಗಲಿ ತಿಳಿದು ಪ್ರಯೋಗಿಸುವ ಶಬ್ದ ಗಳಲ್ಲಿರುವ ಸ್ವಾರಸ್ಯವನ್ನು ತಿಳಿದುಕೊಳ್ಳಲು ಅಸಮರ್ಥರಾಗಿರುವ, ಈ ಕಾಲಘಟ್ಟದಲ್ಲಿ ಇಂತಹ ಒಂದು ಸುಸಂಬದ್ಧವಾದ ಹಲವು ವರ್ಷಗಳ ಪರಿಶ್ರಮದ ಫಲವಾಗಿ ಈ ಶಬ್ದಕೋಶ ಮೂಡಿಬಂದಿದೆ. ಇದರ ರಚನೆ ಮಾಡಿದವರು ಶ್ರೀಯುತ ವಿ ಬಿ ಕುಳಮರ್ವ.


ಪಠ್ಯಪುಸ್ತಕ ರಚನಾ ಕಮ್ಮಟದಲ್ಲಿ ಭಾಗವಹಿಸಿ ಸಂಘಟನಾ ಚಾತುರ್ಯ ಕೊಡುವಂತಹ ಶ್ರೀಯುತರು ಸ್ವಭಾವತಃ ಸರಳ ಸಜ್ಜನ ನಿಗರ್ವಿ ವ್ಯಕ್ತಿತ್ವ, ಸಮಾನ ಮನಸ್ಕರೊಡನೆ ಉತ್ತಮ ಸಂವಹನವನ್ನು ಹೊಂದಿ ಸವಿಮಾತಿನ ಒಬ್ಬ ವ್ಯಕ್ತಿತ್ವವಾಗಿ ನಮ್ಮೆಲ್ಲರ ಕಾಣಿಸಿಕೊಳ್ಳುತ್ತಾರೆ. ಅವರು ಇನ್ನು ಮುಂದೆಯೂ ಸಾಹಿತ್ಯ ಸರಸ್ವತಿಯ ಕೈಂಕರ್ಯವನ್ನು ಮಾಡುವ ಸಾಮರ್ಥ್ಯವನ್ನು ಹೊಂದುವಂತಾಗಲು ದೇವರು ಅವರಿಗೆ ಅಂತಹ ಶಕ್ತಿಯನ್ನು ಕೊಡಲಿ ಎನ್ನುವುದು ಸಾಹಿತ್ಯ ಪ್ರಿಯರಾದ ನಮ್ಮೆಲ್ಲರ ನಲ್ಮೆಯ ನುಡಿಯಾಗಿದೆ. 

-ಶ್ರೀಹರಿ ಭಟ್ಟ

********


ನಿಘಂಟು ರಚನೆಕಾರರಾದ ವಿ.ಬಿ ಕುಳಮರ್ವ ಅವರ ಜತೆ ಕಾಸರಗೋಡಿನ ಹವ್ಯಾಸಿ ಪತ್ರಕರ್ತ ಚಂದ್ರಶೇಖರ ಏತಡ್ಕ ಅವರು ನಡೆಸಿದ ಮಾತುಕತೆಯ ತುಣುಕುಗಳು:

ನಿಘಂಟು ರಚನೆಯ ಹಿಂದಿನ ಪ್ರೇರಣೆ, ಶ್ರಮ, ನಾಡಿನ ಶ್ರೇಷ್ಠ ವಿದ್ವಾಂಸರ ಶುಭ ಹಾರೈಕೆ, ಸಹಕಾರಗಳ ಕುರಿತು ವಿ.ಬಿ ಕುಳಮರ್ವ ಅವರು ಸ್ಮರಿಸಿಕೊಂಡಿದ್ದಾರೆ.





0 تعليقات

إرسال تعليق

Post a Comment (0)

أحدث أقدم