ಅಂಬಿಕಾದಲ್ಲಿ ಎಚ್.ಆರ್.ಡಿ. ಕಾರ್ಯಕ್ರಮ

Upayuktha
0

ಪುತ್ತೂರು: ಶಿಕ್ಷಣ ಮಾರ್ಗದಲ್ಲಿ ಮುಂದಕ್ಕೆ ಸಾಗುತ್ತಾ ಗುರಿಯನ್ನು ಮುಟ್ಟಬೇಕಾದರೆ ರಾಮಾಯಣದ ಶ್ರೀರಾಮ, ಭಾಗವತದ ಶ್ರೀಕೃಷ್ಣನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ಥಿತ ಪ್ರಜ್ಞ ಶ್ರೀರಾಮಚಂದ್ರನ ಧೀರೋದಾತ್ತ, ಆದರ್ಶ ಗುಣಗಳಿಂದ, ಅದನ್ನು ಸರಿಯಾಗಿ ಅರ್ಥೈಸಿ ಅನುಸರಿಸುವುದರಿಂದಾಗಿ ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಲಭ್ಯವಾಗುವುದಲ್ಲದೆ ಸಮಸ್ಯೆಗಳಿಂದ ದೂರವಾಗಲೂ ಸಾಧ್ಯ. ಆದುದರಿಂದ ರಾಮ-ಕೃಷ್ಣರ ಆದರ್ಶ ಪಥದಲ್ಲಿ ಮುಂದೆ ಸಾಗಿ. ಉತ್ತಮ ನಾಯಕನು ಇನ್ನೊಬ್ಬ ನಾಯಕನನ್ನು ತಯಾರು ಮಾಡುತ್ತಾನೆ. ಅಂತಹ ಉತ್ತಮ ನಾಯಕರಾಗಿ ಎಂದು ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಉತ್ತಮ ವಾಗ್ಮಿ ಡಾ.ವಿನಾಯಕ ಭಟ್ ಗಾಳಿಮನೆ ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿಯ ವಿದ್ಯಾರ್ಥಿಗಳಿಗೆ ಎಚ್.ಆರ್.ಡಿ. ಕಾರ್ಯಕ್ರಮದಲ್ಲಿ ನೈತಿಕ ಶಿಕ್ಷಣ ಬೋಧನೆಯ ಸಂಪನ್ಮೂಲ ಕಾರ್ಯಕ್ರಮದಲ್ಲಿ 'ರಾಮಾಯಣದಲ್ಲಿ ಉಕ್ತವಾಗಿರುವ ನಾಯಕತ್ವ ಗುಣ'ದ ವಿಷಯವಾಗಿ ತಿಳಿಸುತ್ತಾ, ವಿದ್ಯಾರ್ಥಿಗಳಿಗೆ ಮೂಲಭೂತ, ಅತ್ಯಾವಶ್ಯಕ ಹಾಗೂ ಉನ್ನತ ನೈತಿಕ ಮೌಲ್ಯಗಳನ್ನೂ ತಿಳಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು. ಪ್ರಯೋಗಾಲಯ ಸಹಾಯಕರಾದ ಮುರಳಿಮೋಹನ ಸಹಕರಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top