||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಗೀತಾಜಯಂತಿ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಗೀತಾಜಯಂತಿ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮ

 


ಮನಸ್ಸಿನ ಚಾಂಚಲ್ಯ ನಿವಾರಣೆಗೆ ಭಗವದ್ಗೀತೆ ಪಠಣ ಮೂಲ ಔಷಧ: ವಿಘ್ನೇಶ್ ವೈ


ಪುತ್ತೂರು: ಮನಸ್ಸಿನ ಚಾಂಚಲ್ಯ ನಿವಾರಣೆಗೆ ಭಗವದ್ಗೀತೆ ಪಠಣ ಮೂಲ ಔಷಧವಾಗಿದೆ. ಜತೆಗೆ ಮನಃ ಶಾಂತಿಗಾಗಿ ಗೀತೆಯಲ್ಲಿ ಹೇಳಿದ ಉಪಾಯಗಳನ್ನು ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ವಿಘ್ನೇಶ್ ವೈ ಹೇಳಿದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ವತಿಯಿಂದ ಗೀತಾಜಯಂತಿಯ ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿ ಅವರು ಮಾತನಾಡಿದರು.


ಪಾಂಡವರೆಂಬ ನ್ಯಾಯಪರರೂ ಕೌರವರೆಂಬ ಅನ್ಯಾಯಿಗಳಿಗೂ ನಡುವೆ ನಡೆದ ಯುದ್ಧದಲ್ಲಿ ಧರ್ಮಾಧರ್ಮಗಳ ವ್ಯತ್ಯಾಸವನ್ನು ತಿಳಿಯದೆ ಮೋಹಾವಿಷ್ಟನಾದ ಅರ್ಜುನನ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಾ ಪರಮಾತ್ಮ ಧರ್ಮವನ್ನು ಸಾರಿದ ಆ ಮಾತುಗಳೇ ಭಗವದ್ಗೀತೆ. ಯುದ್ಧ ಭೂಮಿಯಲ್ಲಿ ಶ್ರೀ ಕೃಷ್ಣನು ಹೇಳಿದ ಗೀತಾ ಸಾರ ಕೇವಲ ಅರ್ಜುನನಿಗೆ ಮಾತ್ರವಲ್ಲ. ಮನುಕುಲದ ಒಳಿತಿಗಾಗಿ ಹೇಳಿದ ಮಾತುಗಳು. ಅವುಗಳನ್ನು ಅನುಸರಿಸಿದರೆ ಜನರು ಮೋಕ್ಷ ಸಾಧಿಸಬಹುದು.


ಶ್ರೀಮದ್ಭಗವದ್ಗೀತೆ ಮೂಲಕ ಪ್ರತಿಯೊಂದಕ್ಕೂ ಸಮಾಧಾನವಿದೆ. ಮನವನ್ನು ಹಿಡಿಯುವುದೇ ಮೊದಲ ಗುರಿ. ಇದೇ ಸಾಮಾನ್ಯರಿಗೆ ಅಸಾಮಾನ್ಯವಾದುದು. ಮನಸ್ಸು ಸಜ್ಜುಗೊಳ್ಳದೆ ಭಗವಂತನನ್ನು ಸೆಳೆಯುವುದಕ್ಕೆ ಸಾಧ್ಯವಿಲ್ಲ. ಗೀತೆಯನ್ನು ಕೇಳುವುದಕ್ಕೂ ಉತ್ಕೃಷ್ಟ ಮನಃಸ್ಥಿತಿ ನಿರ್ಮಾಣಗೊಂಡಿರಬೇಕು. ಸಿಹಿಗಾಗಿ ಕಲ್ಲುಸಕ್ಕರೆ ತಿನ್ನುತ್ತೇವೆ. ಕಲ್ಲುಸಕ್ಕರೆ ಇದ್ದ ಮಾತ್ರಕ್ಕೆ ನಮಗೆ ಸಿಹಿಯ ಅನುಭವ ಆಗಲಾರದು.ಬದಲಾಗಿ ಬಾಯಲ್ಲಿಟ್ಟುಅನುಭವಿಸಬೇಕು.


ಹಾಗೆಯೇ ಗೀತೆಯ ಅರ್ಥ, ಅದರ ಪಾಠ ನಮಗೆ ಅವಶ್ಯವಾದುದು. ಬೇರೆಲ್ಲ ಪ್ರಮಾಣ ಗ್ರಂಥಗಳಂತಲ್ಲದೆ ಗೀತೆಯು ವಿಶೇಷವಾದುದು. ಅದು ಭಗವಂತನೇ ಸ್ವತಃ ಉಚ್ಚರಿಸಿದ ಉಪದೇಶಗಳು ಎಂದು ನುಡಿದರು. ಇದೇ ವೇಳೆ ಮಕ್ಕಳಿಗೆ ಭಗವದ್ಗೀತೆಯ ಹದಿನಾರನೇ ಅಧ್ಯಾಯದ ಶ್ಲೋಕಗಳನ್ನು ಪಠಣ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯೆ ವತ್ಸಲಾರಾಜ್ಞಿ ಮಾತನಾಡಿ ಉತ್ತಮ ವ್ಯಕ್ತಿತ್ವದ ಅರಿವಾದಾಗ ಮಾತ್ರ ಚಿಂತನೆಯ ಉತ್ಕೃಷ್ಟತೆಯನ್ನು ತಿಳಿಯುವುದಕ್ಕೆ ಸಾಧ್ಯವಾದೀತು.ಭಗವದ್ಗೀತೆಯಲ್ಲಿ ಭಾವನಾತ್ಮಕ ವಿಚಾರಗಳಿಗೆ ಆದ್ಯತೆಯಿದೆ. ವ್ಯಕ್ತಿತ್ವವೊಂದರ ಶ್ರೇಷ್ಟತೆ ಮೌಲ್ಯದಲ್ಲಡಗಿದೆ. ಸಂಪ್ರದಾಯದ ಕವಚದೊಳಗೆ ಮೌಲ್ಯಗಳು ಬೆಳೆದಾಗ ಅದು ಗೌರವಾರ್ಹವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.


ಕಾಲೇಜಿನ ಪ್ರಾಚಾರ್ಯ ಮಹೇಶ ನಿಟಿಲಾಪುರ ಮಾತನಾಡಿ ಯಾರು ದೇವರಲ್ಲಿ ಎಲ್ಲರನ್ನೂ ಕಾಣುತ್ತಾರೆಯೋ ಅಂತಹವರು ಭಗವಂತನಿಗೆ ಪ್ರಿಯರಾಗುತ್ತಾರೆ. ಭಗವಂತನನ್ನು ತಿಳಿಯಬೇಕಾದರೆ ಆತನ ಸ್ಥಾನದಲ್ಲಿ ನಮ್ಮನ್ನು ನಾವು ಕಲ್ಪಿಸಿ ಯೋಚಿಸಬೇಕು ಎಂದರು. ಆಧುನಿಕ ಬದುಕು ನಮ್ಮ ಮನಃಸ್ಥಿತಿಯನ್ನೂ ಕಳೆದುಕೊಳ್ಳುವಂತೆ ಮಾಡುತ್ತಿದೆ ಎಂದು ಮರುಕ ವ್ಯಕ್ತಪಡಿಸಿದರು.


ಸಂಸ್ಕೃತ ವಿಭಾಗದ ಉಪನ್ಯಾಸಕ ಜಯಗೋವಿಂದ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾರಂಭದಲ್ಲಿ ಕಾಲೇಜಿನ ಬೋಧಕ, ಬೊಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post