ಡಾ| ಮುರಳಿ ಮೋಹನ್ ಚೂಂತಾರು ಅವರಿಗೆ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ

Upayuktha
0


ಮಂಗಳೂರು: ಕಲಬುರಗಿಯ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನ ನೀಡುವ ಡಾ. ಪಿಎಸ್. ಶಂಕರ ರಾಷ್ಟ್ರೀಯ ವೈದ್ಯಶ್ರೀ ಪ್ರಶಸ್ತಿಗೆ ಮಂಗಳೂರಿನ ದಂತವೈದ್ಯ ಡಾ.ಮುರಳಿ ಮೋಹನ ಚೂಂತಾರು ಅವರನ್ನು ಆಯ್ಕೆ ಮಾಡಲಾಗಿದೆ. 


ಈ ಪ್ರಶಸ್ತಿಯನ್ನು 2022ರ ಜನವರಿ 1ರಂದು ನಡೆಯುವ ಯುವ ಡಾ.ಪಿ.ಎಸ್. ಶಂಕರ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಠಿ ತಿಳಿಸಿದ್ದಾರೆ.


ಡಾ.ಮುರಳಿಮೋಹನ್ ಚೂಂತಾರು ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ 15 ಕೃತಿಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ಕೈಗೊಂಡ ಗ್ರಂಥಾಲಯ ಚಟುವಟಿಕೆಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top