ಶೇಣಿ ಶಾಲೆಗೆ ಕಂಪ್ಯೂಟರ್ ಕೊಡುಗೆ

Upayuktha
0

 

ಶೇಣಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಶೇಣಿ ಇಲ್ಲಿಗೆ ದಿನಾಂಕ 29-12-2021ನೇ ಬುಧವಾರದಂದು ಇನ್‌ಫೋಸಿಸ್ ಕಂಪನಿ ವತಿಯಿಂದ ನೀಡಲಾದ ಮೂರು ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು. ಶೇಣಿ ಶಾಲೆಯ ಹಳೆಯ ವಿದ್ಯಾರ್ಥಿಯಾದ ಡಾ. ಮುರಲೀ ಮೋಹನ್ ಚೂಂತಾರು ಅವರು ಈ ಕಂಪ್ಯೂಟರ್‌ಗಳನ್ನು ಶಾಲೆಯ ಅಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಮಾಧವ ಪಿ.ಟಿ ಪಿಂಡಿಬನ ಅವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಪ್ರಭಾಕರ್ ಮಾಡಬಾಕಿಲು, ಗ್ರಾಮ ಪಂಚಾಯತ್ ಸದಸ್ಯ ಶ್ರೀ ಅಶೋಕ್ ಚೂಂತಾರು, ಶಾಲೆಯ ಹಳೆ ವಿದ್ಯಾರ್ಥಿಗಳಾದ ಮಹೇಶ್ ಚೂಂತಾರು, ಶ್ರೀಮತಿ ಗೀತಾ ಗಣೇಶ್, ನಾಗೇಶ್ ಚೂಂತಾರು, ಸಿದ್ಧಿ ವಿನಾಯಕ ಭಟ್ ಚೂಂತಾರು ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಡಾ. ಮುರಲೀ ಮೋಹನ್ ಚೂಂತಾರು ಅವರ ವಿಶೇಷ ಪ್ರಯತ್ನದ ಫಲವಾಗಿ ಈ ಕೊಡುಗೆ ಶಾಲೆಗೆ ಲಭಿಸಿದೆ.


ಈ ಹಿಂದೆಯು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ಶಾಲೆಯ ಗ್ರಂಥಾಲಯಕ್ಕೆ ಕಪಾಟು ಮತ್ತು ಪುಸ್ತಕಗಳನ್ನು ಒದಗಿಸಿರುತ್ತಾರೆ ಹಾಗೂ ದಿವಂಗತ ಸರೋಜಿನಿ ಭಟ್ ಅವರ ನೆನಪಿನಲ್ಲಿ ಪ್ರತೀ ವರ್ಷ ಒಬ್ಬ ವ್ಯಕ್ತಿಗೆ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಕಳೆದ ಹದಿನೈದು ವರ್ಷಗಳಿಂದ ನೀಡುತ್ತಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top