ಬೆಂಗಳೂರು: ಕರ್ನಾಟಕದಲ್ಲಿ ಮಳೆಗಾಲ ಮುಗಿದು ಇದೀಗ ಚಳಿ ಪ್ರಾರಂಭವಾಗಿದೆ. ಇದರಿಂದಾಗಿ ಹಲವರಿಗೆ ಶೀತ , ಜ್ವರ ಮುಂತಾದ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಇದ್ದಕ್ಕಿದ್ದಂತೆ ಬದಲಾಗುತ್ತಿರುವ ಹವಾಮಾಮದಿಂದಾಗಿ ಅನೇಕ ರೀತಿಯ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲವು ರಾಜ್ಯಗಳಲ್ಲಿ ಮಳೆ ಕೂಡ ಶುರುವಾಗಿದೆ.
ಭಾರತದ ಹವಾಮಾನ ಇಲಾಖೆ ಇಂದಿನಿಂದ ನಾಲ್ಕು ದಿನ ಕೆಲವು ರಾಜ್ಯಗಳಲ್ಲಿ ಶೀತ ಗಾಳಿ ಕಾಣಿಸಿಕೊಳ್ಳುತ್ತಿದ್ದು ಮಳೆಯಾಗುವ ಸಂಭವ ಕೂಡ ಇದೆ ಎಂದು ತಿಳಿಸಿದೆ. ಅರುಣಾಚಲ ಪ್ರದೇಶ, ಕರ್ನಾಟಕ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಮಳೆ ಕಾಣಿಸಿಕೊಳ್ಳಲಿದೆ.
ಇಂದಿನಿಂದ ಡಿಸೆಂಬರ್ 25 ರವರೆಗೆ ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಲಘುವಾಗಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ ಇದರ ಬಗ್ಗೆ ವರದಿ ನೀಡಿದ್ದು ಮುನ್ಸೂಚನೆ ಕೂಡ ನೀಡಿದೆ.