ಬೆಂಗಳೂರು: ಭಾರತೀಯ ವ್ಯಂಗ್ಯಚಿತ್ರಕಾರರ ಸಂಘಟನೆ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್ಸ್) ವತಿಯಿಂದ ಕಾರ್ಟೂನ್ ಫೆಸ್ಟಿವಲ್ 2022- ಬೆಂಗಳೂರು ಉತ್ಸವ ಹಾಗೂ ಕರ್ನಾಟಕದ ನಾಲ್ವರು ಖ್ಯಾತ ವ್ಯಂಗ್ಯಚಿತ್ರಕಾರರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 1ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಎಂ.ಜಿ ರಸ್ತೆಯ ಟ್ರಿನಿಟಿ ಸರ್ಕಲ್ ಬಳಿಯ ಇಂಡಿಯನ್ ಕಾರ್ಟೂನ್ ಗ್ಯಾಲರಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಉತ್ಸವದಲ್ಲಿ ರಾಜ್ಯದ 21 ಮಂದಿ ಹೆಸರಾಂತ ವ್ಯಂಗ್ಯಚಿತ್ರಕಾರರು ರಚಿಸಿದ ದೊಡ್ಡ ಗಾತ್ರದ ಕ್ಯಾರಿಕೇಚರ್ ಗಳ ಪ್ರದರ್ಶನವಿದ್ದು, ಇದು ಜನವರಿ 21ರ ವರೆಗೂ ಮುಂದುವರಿಯಲಿದೆ.
ಕಾರ್ಟೂನ್ ವಾಚ್ ಪತ್ರಿಕೆಯ ಸಂಪಾದಕ ತ್ರಯಂಬಕ ಶರ್ಮಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ.
ಜೀವಮಾನದ ಸಾಧನೆ ಪ್ರಶಸ್ತಿಗೆ ಪಾತ್ರರಾದವರು: ಕೆ.ಆರ್. ಸ್ವಾಮಿ, ವಿ.ಜಿ. ನಾಗೇಂದ್ರ, ಬಿ.ಜಿ. ಗುಜ್ಜಾರಪ್ಪ ಮತ್ತು ಜಿ.ಎಸ್. ನಾಗನಾಥ್.
ಉತ್ಸವದಲ್ಲಿ ಭಾಗಿಯಾಗುವ ವ್ಯಂಗ್ಯಚಿತ್ರ ಕಲಾವಿದರು:
ಗುಜ್ಜಾರಪ್ಪ, ನಂಜುಂಡ ಸ್ವಾಮಿ, ಆರ್‌ಎ ಸೂರಿ, ಸತೀಶ್ ಆಚಾರ್ಯ, ಚಂದ್ರನಾಥ ಆಚಾರ್ಯ, ನಾಗನಾಥ್ ಜಿ.ಎಸ್., ರಘುಪತಿ ಶೃಂಗೇರಿ, ಮನೋಹರ್ ಆಚಾರ್ಯ, ಜೈರಾಮ್ ಉಡುಪ, ಜೀವನ್ ಶೆಟ್ಟಿ, ಜೇಮ್ಸ್ ವಾಜ್, ಸುಭಾಶ್ಚಂದ್ರ, ರವಿ ಪೂಜಾರಿ, ಯತೀಶ್ ಸಿದ್ಧಕಟ್ಟೆ, ಚಂದ್ರ ಗಂಗೊಳ್ಳಿ, ಸಂಕೇತ್ ಗುರುದತ್ತ, ಸತೀಶ್ ಬಾಬು, ಶೈಲೇಶ್ ಉಜಿರೆ, ಜೀಚಾ ಬೋಳ್ಕಟ್ಟೆ, ಪ್ರಸನ್ನ ಕುಮಾರ್, ದತ್ತಾತ್ರಿ ಎಂ.ಎನ್.