ಮಂಗಳೂರು: ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಅಂಡ್ ಕಲ್ಚರಲ್ ಟ್ರಸ್ಟ್ ಮಂಗಳೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ನಾದ ನೃತ್ಯ ದಿನ 2021 'ರಾಧೆ ಎಂಬ ಗಾಥೆ' ಗೇಯ ಕೃತಿಯ ಕಲಾತ್ಮಕ ಅಭಿವ್ಯಕ್ತಿ ಕಾರ್ಯಕ್ರಮ ಇಂದು ಸಂಜೆ 5:30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಕವಿ, ರಂಗನಿರೂಪಕ ಚಕ್ರವರ್ತಿ ದಿವಂಗತ ಉದ್ಯಾವರ ಮಾಧವ ಆಚಾರ್ಯರ ನೆನಪಿನಲ್ಲಿ ಅವರ ಪುತ್ರಿ ಹಾಗೂ ನಾದ ನೃತ್ಯದ ನಿರ್ದೇಶಕಿ ಭ್ರಮರಿ ಶಿವಪ್ರಕಾಶ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಸಂಜೆ 5:30ರಿಂದ 7:30ರ ವರೆಗೆ ನಡೆಯುವ ಈ ಕಾರ್ಯಕ್ರಮವನ್ನು ಕಲಾಪೋಷಕ ಹಾಗೂ ಸಮಾಜ ಸೇವಕರಾದ ಹರಿಕೃಷ್ಣ ಪುನರೂರು ಅವರು ಉದ್ಘಾಟಿಸಲಿದ್ದಾರೆ. ಮೈಸೂರಿನ ವಸುಂಧರಾ ಪ್ರದರ್ಶನ ಕಲೆಗಳ ಕೇಂದ್ರದ ನಿರ್ದೇಶಕರಾದ ಡಾ. ವಸುಂಧರಾ ದೊರೆಸ್ವಾಮಿ ನೆನಪಿನ ನುಡಿಗಳನ್ನು ಆಡಲಿದ್ದಾರೆ. ಉಡುಪಿಯ ಕವಿಗಳು ಹಾಗೂ ಕಲಾ ಸಹೃದಯರಾದ ಬೆಳಗೋಡು ರಮೇಶ್ ಭಟ್ ಭಾಗವಹಿಸಲಿದ್ದಾರೆ.
ರಂಗದ ಮೇಲೆ ವಿ. ಭ್ರಮರಿ ಶಿವಪ್ರಕಾಶ್, ಪ್ರೊ ಸ್ಮಿತಾ ಶೆಣೈ, ವಿ. ಕೃಷ್ಣ ಪವನ್ ಕುಮಾರ್, ವಿ. ವಿನುತಾ ಆಚಾರ್ಯ, ವಿ. ಬಾಲಚಂದ್ರ ಭಾಗವತ್, ವಿ. ಶರ್ಮಿಳಾ ಕೃಷ್ಣಮೂರ್ತಿ, ವಿ. ಮುರಳೀಧರ್, ಕೆ.ವಿ. ಶ್ರೀಸನ್ನಿಧಿ ಅವರು ರಾಧೆಯ ಗಾಥೆಯನ್ನು ಪ್ರದರ್ಶಿಸಲಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ