|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಜಿರೆ ಎಸ್.ಡಿ.ಎಂ.ನ ಡಾ.ನಾರಾಯಣ ಹೆಬ್ಬಾರ್ ಸಂಶೋಧನೆಗೆ ಆಸ್ಟ್ರೇಲಿಯಾ ಪೇಟೆಂಟ್

ಉಜಿರೆ ಎಸ್.ಡಿ.ಎಂ.ನ ಡಾ.ನಾರಾಯಣ ಹೆಬ್ಬಾರ್ ಸಂಶೋಧನೆಗೆ ಆಸ್ಟ್ರೇಲಿಯಾ ಪೇಟೆಂಟ್

ಉಜಿರೆ: ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ನಾರಾಯಣ ಎಸ್ ಹೆಬ್ಬಾರ್ ರಾಸಾಯನಶಾಸ್ತ್ರದಲ್ಲಿನ ತಮ್ಮ ವಿನೂತನ ಸಂಶೋಧನೆಗಾಗಿ ಆಸ್ಟ್ರೇಲಿಯಾ ಸರಕಾರದಿಂದ ಪೇಟೆಂಟ್ ಮಾನ್ಯತೆ ಪಡೆದುಕೊಂಡು ಸಾಧನೆ ಮೆರೆದಿದ್ದಾರೆ.


ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ನಾರಾಯಣ.ಎಸ್.ಹೆಬ್ಬಾರ್ ತಮ್ಮ ಸಂಶೋಧನೆ 'ಪ್ರೇಪರೇಶನ್ ಆಫ್ ಸೈಕ್ಲೋಹೆಕ್ಸೆನ್ ಡಿರೈವೇಟಿವ್  ಆಂಡ್ ಆಸ್ ಕೊರೋಷನ್ ಇನ್ಹಿಬಿಟರ್ ಫಾರ್ ಮೈಲ್ಡ್ ಸ್ಟೀಲ್' ಗಾಗಿ ಆಸ್ಟ್ರೇಲಿಯ ಸರಕಾರದ ಕಾಮನ್ವೆಲ್ತ್ ನಿಂದ ಪ್ರತಿಷ್ಠಿತ ಪೇಟೆಂಟ್ ಪಡೆದುಕೊಂಡಿದ್ದಾರೆ. ಈ ಸಂಶೋಧನೆ ಮೃದು ಉಕ್ಕಿಗೆ ಬಳಸಬಹುದಾದ ತುಕ್ಕು ಪ್ರತಿಬಂಧಕ ಸಂಯುಕ್ತದ ತಯಾರಿಯ ಕುರಿತಾಗಿದೆ.


ಪ್ರಸ್ತುತ ಪೇಟೆಂಟ್ ಗೌರವ ಪಡೆದುಕೊಂಡ 8 ಸದಸ್ಯರನ್ನೊಳಗೊಂಡ ತಂಡದಲ್ಲಿ ಒಬ್ಬರಾಗಿರುವ ಡಾ. ನಾರಾಯಣ ಹೆಬ್ಬಾರ್ ಅವರು ಕೆಲ ವರ್ಷಗಳಿಂದ ರಾಸಾಯನಕ್ಷೇತ್ರದಲ್ಲಿ ಅನೇಕ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.  ಪ್ರಸ್ತುತ ಸಂಶೋಧನೆಯ ಭಾಗವಾಗಿ ಇವರು ತುಕ್ಕಿಗೆ ಸಂಬಂದಿಸಿದ ಅಧ್ಯಯನಗಳಲ್ಲಿ ಹೆಚ್ಚು ಒಳಗೊಂಡಿದ್ದರು.


ಈ ಕುರಿತು ಮಾತನಾಡಿದ ಅವರು "ಈ ಹಿಂದೆ 2017ರಲ್ಲಿ ಪೇಟೆಂಟ್ ಮಾನ್ಯತೆಯಿಂದ ವಂಚಿತರಾಗಿದ್ದೆವು. ಹಲವು ಪ್ರಯತ್ನಗಳ ಬಳಿಕ ಈ ಬಾರಿ ಯಶಸ್ಸು ಕಂಡಿರುವುದಕ್ಕೆ ಖುಷಿಯಿದೆ. ಭವಿಷ್ಯದಲ್ಲಿ ಮತ್ತಷ್ಟು ಸಂಶೋಧನೆಗಳಲ್ಲಿ ತೊಡಗಿಕೊಂಡು ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸುವ ಇರಾದೆಯಿದೆ" ಎಂದು ಸಂತಸ ವ್ಯಕ್ತಪಡಿಸಿದರು.


ಕಾಲೇಜಿನ ಪ್ರಾಧ್ಯಾಪಕರು ವಿದೇಶಿ ಸರಕಾರದಿಂದ ಪೇಟೆಂಟ್ ಪಡೆದುಕೊಂಡಿರುವುದು ಇದೇ ಮೊದಲು ಎಂಬುದು ಗಮನಾರ್ಹ. ಪ್ರಸ್ತುತ ಪೇಟೆಂಟ್ 8 ವರ್ಷಗಳ ಕಾಲಾವಧಿಯನ್ನು ಹೊದಿರಲಿದ್ದು, ನಿರ್ದಿಷ್ಟ ರಾಯಧನವನ್ನೂ ಒಳಗೊಳ್ಳಲಿದೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಪೇಟೆಂಟ್ ಸಹಕಾರಿಯಾಗಲಿದೆ.


"ವಿದ್ಯಾರ್ಥಿಗಳಲ್ಲಿ ಸಂಶೋಧನಾ ಕೌಶಲ್ಯ ವೃದ್ಧಿಸಬೇಕು. ಅದಕ್ಕಾಗಿ ಅವಕಾಶಗಳನ್ನು ಕಲ್ಪಿಸುವುದು ಮತ್ತು ಅವಕಾಶಗಳ ಸದ್ಭಳಕೆ ಅಗತ್ಯ. ಉನ್ನತ ಶಿಕ್ಷಣಕ್ಕಷ್ಟೇ ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಸೀಮಿತಗೊಳಿಸಬಾರದು. ಸಂಶೋಧನೆ, ಪೇಟೆಂಟ್ಗಳ ಕಡೆಗೂ ಗಮನಹರಿಸಬೇಕು" ಎಂದು ಅವರು ಅಭಿಪ್ರಾಯಪಟ್ಟರು. ಎಸ್.ಡಿ.ಎಂ ಕಾಲೇಜಿನ ನೈತಿಕ ಬೆಂಬಲ ಮತ್ತು ಸಹಕಾರವೂ ಇವರ ಈ ಸಾಧನೆಗೆ ಪ್ರೇರಣೆಯಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم