ಮಂಗಳೂರು: ಅಖಿಲ ಭಾರತ ಫಿಸೀಶೀಯನ್ನರ ಒಕ್ಕೂಟದ ದಕ್ಷಿಣ ಕನ್ನಡ ಘಟಕದ (ಎಪಿಐ-ಡಿಕೆ) ವತಿಯಿಂದ ಡಿ. 23, ಗುರುವಾರದಂದು ನಗರದಲ್ಲಿ 'ಫಿಸೀಶಿಯನ್ನರ ದಿನಾಚರಣೆ-2021' ಅನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಗೋಲ್ಡ್ ಫಿಂಚ್ ಹೋಟೆಲ್ ನಲ್ಲಿ ರಾತ್ರಿ 7.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಎನ್.ವಿನಯ ಹೆಗ್ಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಒಕ್ಕೂಟದ ದಕ್ಷಿಣ ಕನ್ನಡ ಘಟಕದ ಅಧ್ಯಕ್ಷ ಡಾ.ಗಣೇಶ್ ಖಂಡಿಗೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯದರ್ಶಿ ಡಾ.ಕಿಶನ್ ದೇಲಂಪಾಡಿ, ಖಜಾಂಚಿ ಡಾ.ರಾಜೇಶ್ ರೈ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಸನ್ಮಾನ: ಒಕ್ಕೂಟದ ಸದಸ್ಯರಾದ ಡಾ.ಆರ್.ಸಿ.ಸಾಹೂ, ಡಾ.ಜೆ.ಪಿ.ಆಳ್ವ ಹಾಗೂ ಡಾ.ಪಿ.ಎಸ್.ಪ್ರಕಾಶ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ