ಕಣ್ಮನಗಳಿಗೆ ತಂಪನು ಎರೆಯುವ,
ನಮ್ಮೀ ಹೃದಯದಲ್ಲಿ ನಾಡಿನ
ನಾದಸ್ವರವ ನುಡಿಸುವ.
ಅಭಿಮಾನದ ಭಾಷೆಯಿದು,
ಹೆಮ್ಮೆಯ ನಾಡಿದು.
ನಾಡಿನೆಲ್ಲೆಡೆ ಡಿಂಡಿಮವ ಬಾರಿಸುತಾ,
ಕನ್ನಡ ನುಡಿಯ ಸೊಬಗನ್ನು ಪಸರಿಸುತ.
ಸೌಹಾರ್ದತೆಯ ಮೆರೆಯುವ ಮಾಣಿಕ್ಯಧಾರೆಯಲಿ,
ಜ್ಞಾನ ಪೀಠದ ರತ್ನ ನಿನ್ನ ಮುಕುಟದಲ್ಲಿ.
ಬಾದಾಮಿಯ ಪರಂಪರೆಯಿಹುದು ಈ ನೆಲದಲಿ,
ಮೈಸೂರಿನ ವೈಭವದ ಸೊಗಸಿದೆ ಬೀಡಲಿ.
ಹಂಪಿಯ ಸ್ವರ್ಣಯುಗ ಮತ್ತೆ ಬಿಗಡಾಯಿಸಲಿ,
ಕರಾವಳಿಯ ಯಕ್ಷಗಾನದ ಸೊಬಗಲಿ.
ಜೀವನದಿ ಕಾವೇರಿ ಹರಿಯುವ ಸೊಗಸು,
ಜೋಗದ ಸಿರಿಯ ಈ ಸೊಬಗು.
ಹಸಿರು ವನಸಿರಿಯ ಬೀಡು,
ನಮ್ಮೆಲ್ಲರ ಹೆಮ್ಮೆಯ ಕರುನಾಡು.
ಕನ್ನಡವೇ ಎಲ್ಲಾ... ಕನ್ನಡವಿಲ್ಲದೆ ಬೇರೇನೂ ಇಲ್ಲ,
ರಾಜ್ಯೋತ್ಸವದ ದಿನವಾದ್ರೂ ಕನ್ನಡ ಬಳಸೋಣ ಎಲ್ಲಾ.
ಶಾಂತಿ -ಪ್ರೇಮ -ಸಹನೆಯ ನಾಡಿದು,
ಎಲ್ಲರ ಮನದಲ್ಲಿ ನಿರ್ಮಲತೆಯನ್ನು ನೀಡಿದ ಬೀಡಿದು.
ಮೊಳಗಲಿ ಕನ್ನಡದ ಕಹಳೆಯು,
ಉಸಿರಾಗಲಿ ಕನ್ನಡ ಭಾಷೆಯೂ.
ಕನ್ನಡಕ್ಕಾಗಿ ನನ್ನ ಸಾಹಿತ್ಯ ಸೇವೆಯು,
ಕನ್ನಡಾಂಬೆಯ ಪಾದಕೆ ಕೋಟಿ ಕೋಟಿ ನಮನವು.
✍️ ನಾರಾಯಣ. ಕುಂಬ್ರ
ಲ್ಯಾಬ್ ಸಹಾಯಕರು, ರಸಾಯನ ಶಾಸ್ತ್ರ ವಿಭಾಗ,
ವಿವೇಕಾನಂದ ಕಾಲೇಜು, ನೆಹರು ನಗರ, ಪುತ್ತೂರು.
ದ. ಕ.574203.
ಮೊ.ನಂ.8073319717
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ