ಮರಿಯಾನೆಗೆ 'ಪುನೀತ್' ಹೆಸರಿಟ್ಟು ಅಗಲಿದ ಅಪ್ಪುವಿಗೆ ವಿಶೇಷ ಗೌರವವನ್ನು ಸಮರ್ಪಿಸಿದ ಅರಣ್ಯ ಇಲಾಖೆ

Upayuktha
0

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡುವ ಮುಖಾಂತರ ಅರಣ್ಯ ಇಲಾಖೆಯು ಅಗಲಿದ ಅಪ್ಪುವಿಗೆ ವಿಶೇಷ ಗೌರವವನ್ನು ಸಮರ್ಪಿಸಿದೆ.


ಎರಡು ತಿಂಗಳ ಹಿಂದೆಯಷ್ಟೇ ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ್ದರು. ಅಲ್ಲಿನ ಮರಿ ಆನೆಯನ್ನು ಮುದ್ದಿಸಿದ್ದರು.


ಇಂದು ಸಕ್ರೆಬೈಲು ಆನೆ ಬಿಡಾರದಲ್ಲಿ ತಾಯಿ‌ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ವೀನಿಂಗ್ ಕಾರ್ಯಕ್ರಮ ನಡೆದಿದೆ. ನೇತ್ರಾ ಹೆಸರಿನ ತಾಯಿ ಆನೆಯಿಂದ ಮರಿಯನ್ನು ಇಂದು ಬೇರ್ಪಡಿಸಲಾಗುತ್ತಿದೆ‌. ಈ ಸಂದರ್ಭದಲ್ಲಿ ಮರಿಯಾನೆಗೆ 'ಪುನೀತ್' ಹೆಸರಿಟ್ಟು ನಾಮಕರಣವನ್ನು ಮಾಡಲಾಗಿದೆ.


ಈ ತನಕ ದೇವರ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರನ್ನು ಮರಿ ಆನೆಗಳಿಗೆ ಇಡಲಾಗುತ್ತಿತ್ತು. ಆದರೆ ಪ್ರಥಮ ಬಾರಿಗೆ ಮರಿ ಆನೆಗೆ ಚಿತ್ರನಟರೊಬ್ಬರ ಹೆಸರನ್ನು ನಾಮಕರಣ ಮಾಡಲಾಯಿತು ಎನ್ನಲಾಗಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top