ನ.26 ಹಾಗೂ 27 ರಂದು ಕೋವಿಡ್ ಲಸಿಕಾ ಬೃಹತ್ ಶಿಬಿರ

Upayuktha
0

 


ಮಂಗಳೂರು: ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಾದ್ಯಂತ ಇದೇ ನ.26 ಹಾಗೂ 27 ರಂದು ಬೃಹತ್ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ.


ಈ ಬೃಹತ್ ಲಸಿಕಾ ಮೇಳವು ಜಿಲ್ಲೆಯ ಎಲ್ಲಾ ಉಪಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ.


ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ನಗರದ ಎಲ್ಲಾ ಕಾಲೇಜುಗಳ ಎನ್.ಎಸ್.ಎಸ್ ವಿದ್ಯಾರ್ಥಿಗಳು ಹಾಗೂ ಅದರ ಯೋಜನಾಧಿಕಾರಿಗಳ ಸಹಯೋಗದೊಂದಿಗೆ ಲಸಿಕಾ ಮಿತ್ರರು ಮನೆ ಮನೆಗೆ ಆಗಮಿಸಿ ಲಸಿಕೆಯ ಅರಿವು ಮೂಡಿಸುವರು. 


ಬೃಹತ್ ಲಸಿಕಾ ಮೇಳಕ್ಕೆ ಪೂರಕವಾಗಿ ನ.26 ಹಾಗೂ 27ರಂದು ಒಂದು ಮೊಬೈಲ್ ವ್ಯಾಕ್ಸಿನ್ ಯೂನಿಟ್‍ನೊಂದಿಗೆ ಜನಸಂದಣಿಯ ಸ್ಥಳಗಳಲ್ಲಿ ಪ್ರಚಾರ ಕೈಗೊಳ್ಳುವ ಲಸಿಕಾ ಮಿತ್ರರು ಲಸಿಕೆಯ ಜೊತೆಗೆ ಸಂಚರಿಸಿ ಸ್ಥಳದಲ್ಲೇ ಲಸಿಕೆ ಕೊಟ್ಟು ಜನ ಜಾಗೃತಿ ಮೂಡಿಸಲಿದ್ದಾರೆ.


ಈ ಕಾರ‍್ಯಕ್ರಮವು ನ.26ರ ಬೆಳಿಗ್ಗೆ 9 ಗಂಟೆಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಚಾಲನೆಗೊಂಡು, 9.30ಕ್ಕೆ ಒಷಿಯನ್ ಪರ್ಲ್ ಬಳಿ ಬರಲಿದೆ. ಈ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಎನ್.ಎಸ್.ಎಸ್ ವಿದ್ಯಾರ್ಥಿಗಳು ಅಲ್ಲಿ ಸೇರಿ ಲಸಿಕೆ ಪಡೆಯದವರನ್ನು ಲಸಿಕೆ ಪಡೆಯಲು ಹುರಿದುಂಬಿಸುವ ಜೊತೆಗೆ ವಿದ್ಯಾರ್ಥಿಗಳು ಲಸಿಕಾ ಮಿತ್ರ ಗುರುತಿನ ಚೀಟಿ ಜೊತೆ ವಿವಿಧ ಆಕರ್ಷಕ ಲಸಿಕಾ ಮಿತ್ರನ ವೇಷ ಭೂಷಣದೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.


ಕೆಲಸ ಕಾರ‍್ಯ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 7.30 ರಿಂದ ಸಂಜೆ 7.30 ರವರೆಗೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top