ಮಂಗಳೂರು: ವಿಶ್ವ ಕೊಂಕಣಿ ಕೇಂದ್ರ (ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನದ) ನೂತನ ಅಧ್ಯಕ್ಷರಾಗಿ ನಂದಗೋಪಾಲ್ ಶೆಣೈ ಆಯ್ಕೆಯಾಗಿದ್ದಾರೆ.
ಗುರುವಾರ (ನ.25) ನಡೆದ ಪ್ರತಿಷ್ಠಾನದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಆ ಬಳಿಕ ನಡೆದ ನೂತನ ಟ್ರಸ್ಟಿಗಳ ಸಭೆಯಲ್ಲಿ ನೂತನ ಆಡಳಿತ ಮಂಡಳಿಯು ಅಧಿಕಾರ ವಹಿಸಿಕೊಂಡಿತು.
ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಸಮಾಜ ಸೇವಕ ನಂದಗೋಪಾಲ್ ಶೆಣೈ ಅವರು 2021-2024 ರ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಕುಡ್ಪಿ ಜಗದೀಶ್ ಶೆಣೈ (ಉಪಾಧ್ಯಕ್ಷರು), ಗಿಲ್ಬರ್ಟ್ ಡಿಸೋಜ (ಉಪಾಧ್ಯಕ್ಷರು), ಡಾ ಕಿರಣ್ ಬುಡ್ಕುಲೆ (ಉಪಾಧ್ಯಕ್ಷರು), ಬಿಆರ್ ಭಟ್ (ಖಜಾಂಚಿ), ಗಿರಿಧರ್ ಕಾಮತ್ (ಕಾರ್ಯದರ್ಶಿ), ಸ್ನೇಹಾ ವಿ ಶೆಣೈ (ಜಂಟಿ ಕಾರ್ಯದರ್ಶಿ), ಡಾ ಕಸ್ತೂರಿ ಮೋಹನ್ ಪೈ (ಟ್ರಸ್ಟಿ), ಕೆ.ಬಿ.ಖಾರ್ವಿ (ಟ್ರಸ್ಟಿ), ಮುರಳೀಧರ ವಿ ಪ್ರಭು (ಟ್ರಸ್ಟಿ), ಯು ಶಕುಂತಲಾ ಆರ್ ಕಿಣಿ (ಟ್ರಸ್ಟಿ), ರಮೇಶ್ ಪೈ ಕಣ್ಣನೋರೆ (ಟ್ರಸ್ಟಿ), ಮೆಲ್ವಿನ್ ಯುಜಿನ್ ರೋಡ್ರಿಗಸ್ (ಟ್ರಸ್ಟಿ), ಡಿ ರಮೇಶ್ ನಾಯ್ಕ್ (ಟ್ರಸ್ಟಿ), ನಾರಾಯಣ ನಾಯ್ಕ್ (ಟ್ರಸ್ಟಿ) , ಸಿ ವತಿಕಾ ಕಾಮತ್ (ಟ್ರಸ್ಟಿ) ಮತ್ತು ವೆಂಕಟೇಶ್ ಪ್ರಭು (ಟ್ರಸ್ಟಿ) ಇವರು ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನದ ಆಡಳಿತ ಮಂಡಳಿಯ ಅಧಿಕಾರ ವಹಿಸಿಕೊಂಡರು.
ಸ್ಥಾಪಕ ಮತ್ತು ನಿರ್ಗಮಿತ ಅಧ್ಯಕ್ಷ ಬಸ್ತಿ ವಾಮನ್ ಶೆಣೈ ಅವರ ಅದ್ಭುತ ಸೇವೆಯನ್ನು ಪರಿಗಣಿಸಿ, ಟ್ರಸ್ಟಿಗಳ ಮಂಡಳಿಯು ಅವರನ್ನು ಪ್ರತಿಷ್ಠಾನದ ಸಹ-ಅಧ್ಯಕ್ಷರಾಗಿ ಮಾರ್ಗದರ್ಶಕರಾಗಿ ಮುಂದುವರಿಯುವಂತೆ ವಿನಂತಿಸಿತು. ಮಂಡಳಿಯು ವಿಶ್ರಾಂತ ಅಧ್ಯಕ್ಷ ಆರ್ ವಿ ದೇಶಪಾಂಡೆ ಮತ್ತು ಅಧ್ಯಕ್ಷ ಡಾ ಪಿ ದಯಾನಂದ ಪೈ ಅವರಿಗೆ ಕೃತಜ್ಞತೆ ಅರ್ಪಿಸಿತು.
ಪಿ ಸತೀಶ್ ಪೈ, ಟಿವಿ ಮೋಹನ್‌ದಾಸ್ ಪೈ, ಡಾ ರಂಜನ್ ಪೈ, ಕೆವಿ ಕಾಮತ್, ಗ್ರೇಸ್ ಪಿಂಟೋ, ರಾಮದಾಸ್ ಕಾಮತ್, ಪ್ರದೀಪ್ ಜಿ ಪೈ, ಜಿಸೆಲ್ ಡಿ ಮೆಹ್ತಾ, ವಿಲಿಯಂ ಡಿಸೋಜಾ, ಗೋಕುಲನಾಥ್ ಪ್ರಭು, ಉಲ್ಲಾಸ್ ಕಾಮತ್, ರೊನಾಲ್ಡ್ ಕೊಲಾಸೊ ಮತ್ತು ಇತರರ ಸಹಿತ ಮುಂತಾದ ಖ್ಯಾತ ಪೋಷಕ ಟ್ರಸ್ಟಿಗಳನ್ನು ಒಳಗೊಂಡಿರುವ ಮಂಡಳಿಗೆ ಹೊಸದಾಗಿ ಚುನಾಯಿತರಾದ 16 ಮಂದಿ ಟ್ರಸ್ಟಿಗಳು ಸೇರಿದ್ದಾರೆ.
ಕೊಂಕಣಿ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಬಸ್ತಿ ವಾಮನ್ ಶೆಣೈ ಅವರು ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಠಾನವನ್ನು 1996 ರಲ್ಲಿ ಸ್ಥಾಪಿಸಿದರು. 2009 ರಲ್ಲಿ ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸಿದರು. ಅಂದಿನಿಂದ ಇದು ವಿವಿಧ ಜಾತಿ ಮತ್ತು ಧರ್ಮಕ್ಕೆ ಸೇರಿದ ಕೊಂಕಣಿ ಮಾತನಾಡುವ ಜನರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿಯನ್ನು ಸಂರಕ್ಷಿಸಲು ಒಂದು ಕೇಂದ್ರವಾಗಿ ಇದು ಕೆಲಸ ಮಾಡುತ್ತಿದೆ.
ಖ್ಯಾತ ಚಿಂತಕ, ಸಮಾಜಸೇವಕ ಮತ್ತು ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಮಾರ್ಗದರ್ಶಕ ಟಿವಿ ಮೋಹನ್‌ದಾಸ್ ಪೈ ಅವರ ವಿಷನ್ ಟಿವಿಎಂ ಕಾರ್ಯಕ್ರಮದಡಿಯಲ್ಲಿ, ವಿಶ್ವ ಕೊಂಕಣಿ ಕೇಂದ್ರವು ಕೊಂಕಣಿ ಸಮುದಾಯವನ್ನು ಸಬಲೀಕರಣಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಅವುಗಳಲ್ಲಿ ಒಂದಾದ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ಕಾರ್ಯಕ್ರಮವು 26,000 ಕ್ಕೂ ಹೆಚ್ಚು ವಿದ್ಯಾರ್ಥಿ ವೇತನಗಳನ್ನು ನೀಡಿದೆ. ರಾಮದಾಸ್ ಕಾಮತ್ ಯು ಅವರ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 28 ಕೋಟಿ ರೂ.ಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನಗಳು ವಿಶ್ವ ಕೊಂಕಣಿ ಕೇಂದ್ರವು ವಿತರಿಸಿದೆ. ಅಮೃತ್ ಕೊಂಕಣಿ ಕಾರ್ಯಕ್ರಮದಡಿಯಲ್ಲಿ ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಬೆಳವಣಿಗೆಗೆ ಕೊಡುಗೆ ನೀಡುವ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ