ಅರಿವು ಶೈಕ್ಷಣಿಕ ಸಾಲ ಪಡೆಯಲು ಅರ್ಜಿ ಆಹ್ವಾನ

Upayuktha
0



ಮಂಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಬೌದ್ಧ, ಕ್ರಿಶ್ಚಿಯನ್, ಜೈನ್ಸ್, ಮುಸ್ಲಿಂ, ಪಾರ್ಸಿ ಹಾಗೂ ಸಿಖ್ಖ್ ಜನಾಂಗದ 2021-22ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ ಸಿ.ಇ.ಟಿ/ನಿಟ್ (M.B.B.S./ B.D.S/Ayush, Bachelor of Architecture/B.E/Be.Tech only) ವಿದ್ಯಾರ್ಥಿಗಳು ಸಾಲ ಪಡೆಯಲು ಬಯಸಿದರೆ ನಿಗಮದ ವೆಬ್‍ಸೈಟ್ kmdconline.karnataka.gov.in ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ.


ಅರ್ಜಿ ಸಲ್ಲಿಕೆ ಇದೇ ನವೆಂಬರ್ 5 ರಿಂದ ಆರಂಭವಾಗಿದ್ದು, ಕೊನೆಯ ದಿನಾಂಕ ಕೆ.ಇ.ಎ ಕೌನ್ಸೆಲಿಂಗ್‍ನ ದಿನವಾಗಿರುತ್ತದೆ.


ಕೆ.ಎಂ.ಡಿ.ಸಿ ವೆಬ್‍ಸೈಟ್ kmdconline.karnataka.gov.in ನಲ್ಲಿ  ವಿದ್ಯಾರ್ಥಿಗಳು ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ ನಂತರ ಇಂಡೆಮ್ನಿಟಿ ಬಾಂಡ್ ಹಾಗೂ ಇತರೆ ದಾಖಲಾತಿಗಳನ್ನು ಕೌನ್ಸಿಲಿಂಗ್ ಮುಗಿದ ಕೂಡಲೇ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಆಜಾದ್ ಭವನ, 2ನೇ ಮಹಡಿ, ಪಾಂಡೇಶ್ವರ, ಮಂಗಳೂರು ತಾಲೂಕು, ಇಲ್ಲಿ ಸಲ್ಲಿಸಬೇಕೆಂದು ಕೆ.ಎಂ.ಡಿ.ಸಿಯ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top