||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೀಟ್ ಫಲಿತಾಂಶ : ತಾಲೂಕಿನ ಆಸುಪಾಸಿನಲ್ಲಿಯೇ 500ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅಂಬಿಕಾಕ್ಕೆ ಮೊದಲ ಸ್ಥಾನ

ನೀಟ್ ಫಲಿತಾಂಶ : ತಾಲೂಕಿನ ಆಸುಪಾಸಿನಲ್ಲಿಯೇ 500ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅಂಬಿಕಾಕ್ಕೆ ಮೊದಲ ಸ್ಥಾನಶೇ. 85ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹ


ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿನ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ  85 ಶೇಕಡಾಕ್ಕಿಂತಲೂ ಅಧಿಕ ಮಂದಿ ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಒಟ್ಟು 144 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 123 ಮಂದಿ ಅರ್ಹತಾ ಅಂಕ ದಾಖಲಿಸಿದ್ದಾರೆ. ಇದಲ್ಲದೆ ನಾಲ್ಕು ಮಂದಿ ವಿದ್ಯಾರ್ಥಿಗಳು ಐದುನೂರಕ್ಕೂ ಅಧಿಕ ಅಂಕ ಗಳಿಸುವ ಮೂಲಕ, ಪುತ್ತೂರು ತಾಲೂಕಿನ ಆಸುಪಾಸಿನ ತಾಲೂಕುಗಳಲ್ಲಿ ಐದುನೂರಕ್ಕೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯಕ್ಕೆ ಮೊದಲ ಸ್ಥಾನ ದೊರೆತಿದೆ. Upayuktha

ಒಟ್ಟು 720 ಅಂಕಗಳಲ್ಲಿ ನಡೆಯುವ ನೀಟ್ ಪರೀಕ್ಷೆಯಲ್ಲಿ ಪುತ್ತೂರಿನ ಪಡೀಲು ನಿವಾಸಿಗಳಾದ ಎನ್ ರವೀಂದ್ರ ಪೈ ಹಾಗೂ ಛಾಯಾ ಆರ್ ಪೈ ದಂಪತಿ ಪುತ್ರಿ ಎನ್ ರಮ್ಯಾ ಪೈ 547 ಅಂಕ (96.84 %) ಗಳಿಸಿದ್ದಾರೆ. ಬಂಟ್ವಾಳದ ಪೆರಾಜೆ ಗ್ರಾಮದ ಕೃಷ್ಣ ಕುಮಾರ್ ಎನ್ ಹಾಗೂ ವಿಜಯ ಲಕ್ಷ್ಮಿ ವಿ ಕೆ ದಂಪತಿ ಪುತ್ರಿ ಶ್ರೀಲಕ್ಷ್ಮಿ ಎನ್ 540 ಅಂಕ (96.53 %),  ಪುತ್ತೂರಿನ ಮೊಟ್ಟೆತ್ತಡ್ಕ ನಿವಾಸಿಗಳಾದ ಸುರೇಶ್ ಮಮದಾಪುರ್ ಹಾಗೂ ಕಮಲಾ ಬಾಯಿ ದಂಪತಿ ಪುತ್ರ ಶಿವಸಾಯಿ ಎಸ್ ಎಂ 534 ಅಂಕ (96.25 %), ಮೈಸೂರಿನ ವಿಜಯನಗರ ನಿವಾಸಿಗಳಾದ ರಾಜು ಮತ್ತು ತನುಜಾ ಪಿ ದಂಪತಿಗಳ ಪುತ್ರಿ ರಕ್ಷಿತಾ ಆರ್ 510 ಅಂಕ (96.04 %), ಬಂಟ್ವಾಳದ ಸತಿಕಲ್ಲು ನಿವಾಸಿಗಳಾದ ಎಂ.ಅಬ್ದುಲ್ ಶುಕೂರ್ ಹಾಗೂ ನಸೀಮಾ ಭಾನು ದಂಪತಿ ಪುತ್ರ ಮೊಹಮ್ಮದ್ ಆಶಿಕ್ 477 ಅಂಕ (93.12 %), ಬಂಟ್ವಾಳದ ನೇರಳಕಟ್ಟೆಯ ಶ್ರೀಧರ ರೈ ಕೆ ಹಾಗೂ ರತ್ನಾ ರೈ ದಂಪತಿ ಪುತ್ರಿ ಅನೂಷಾ ರೈ ಕೆ ಅಂಕ 446 (91.05 %), ಸುಳ್ಯದ ಮುರುಳ್ಯ ನಿವಾಸಿಗಳಾದ ವಸಂತ ವಿ.ಎಂ ರೈ ಹಾಗೂ ಶಶಿಕಲಾ ರೈ ದಂಪತಿ ಪುತ್ರಿ ವರ್ಷಾ ವಿ ರೈ 444 ಅಂಕ (90.90 %), ಪುತ್ತೂರಿನ ಕರ್ನೂರಿನ ಮಹಾಬಲ ರೈ ಕೆ ಹಾಗೂ ಜಯಂತಿ ದಂಪತಿ ಪುತ್ರ  ಶ್ರೇಯಸ್ ರೈ ಕೆ 443 ಅಂಕ (90.83 %), ಹಾಗೂ ಮಡಿಕೇರಿಯ ಶ್ರೀನಿವಾಸ್ ಜಿ.ಕೆ ಹಾಗೂ ಪ್ರೇಮಲತಾ ದಂಪತಿ ಪುತ್ರಿ ಐಶ್ವರ್ಯಾ ಜಿ ಎಸ್ 414 ಅಂಕ (88.84 %) ಅಂಕ ದಾಖಲಿಸಿ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post