ಕನಸೆಂಬುದು ಮನುಷ್ಯನ ಜೀವನದಲ್ಲಿ ಭವಿಷ್ಯದ ಮುನ್ಸೂಚನೆ ನೀಡುವ ಕನ್ನಡಿ. ಇದೊಂದು ಕಲ್ಪನಾ ಛಾಯೆ. ಕಣ್ಣಿಗೆ ಕಾಣದ, ಸ್ಪರ್ಶಕ್ಕೆ ಸಿಗದ ಆದರೂ, ಅನುಭವಕ್ಕೆ ಬರುವ ಸೆಳೆತವದು. ಒಮ್ಮೊಮ್ಮೆ ಬೆಚ್ಚಿ ಬೀಳಿಸುವ ಕನಸುಗಳು ಒಮ್ಮೊಮ್ಮೆ ಮನಸಿಗೆ ಮುದ ನೀಡುತ್ತದೆ. ನಮ್ಮ ಬದುಕಿನ ಮುಂದಿನ ಪ್ರತಿಯೊಂದು ಕ್ಷಣವೂ ಕನಸುಗಳಾಗಿವೆ. ಪ್ರತಿಯೊಬ್ಬರ ಜೀವನದೊಂದಿಗೂ ಕನಸುಗಳು ಅವಿನಾಭಾವ ಸಂಬಂಧ ಹೊಂದಿದೆ. ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವರು.
ಕನಸುಗಳು ನನಸಾಗುವುದಿಲ್ಲ ಎಂಬುದು ಎಷ್ಟು ಸುಳ್ಳೋ, ಎಲ್ಲಾ ಕನಸುಗಳು ನನಸಾಗುವುದು ಎಂಬುವುದು ಸುಳ್ಳು. ಕನಸುಗಳನ್ನು ಅರ್ಥ ಮಾಡಿಕೊಳ್ಳುವುದು ಬಲುಕಷ್ಟ.
ಮನಸ್ಸಿನ ಆತಂಕಗಳು ಕನಸುಗಳಲ್ಲಿ ಕಾಣುತ್ತದೆ ಎಂಬುದು ಎಷ್ಟೋ ಜನರ ನಂಬಿಕೆ. ಅದು ಮೂಢನಂಬಿಕೆಯಂತೂ ಅಲ್ಲ. ನಾವು ಕಾಣುವ ಕನಸುಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಒಂದೊಂದು ಕಲೆಗಳಿರುತ್ತದೆ.
ಕನಸುಗಳು ಜೀವನದ ಅವಿಭಾಜ್ಯ ಅಂಗ. ನಮ್ಮ ಪ್ರತಿ ನಿದಿರೆಯಲ್ಲೂ ಒಂದೊಂದು ಹೊಸ ಕನಸಿನ ಛಾಯೆ ಇದ್ದೇ ಇರುತ್ತದೆ. ಬೇಡವೆಂದರೂ ಬರುವ ಕನಸುಗಳಿಗೆ ತಡೆ ಹಿಡಿಯಲಾಗದು. ಅಸ್ಪಷ್ಟ ರೂಪದ ಕನಸುಗಳು ನಮ್ಮ ಮಾನಸಿಕ ಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡುತ್ತವೆ.
ಕನಸುಗಳಿಗೆ ಯಾವುದೇ ರೀತಿಯ ಆಯಾಮಗಳಿರುವುದಿಲ್ಲ. ಕೆಲವೊಂದು ವಸ್ತುಗಳು ಪ್ರಾಣಿಗಳು ಕನಸಿನಲ್ಲಿ ಬಂದರೆ, ಕೆಲವೊಮ್ಮೆ ಪರಿಚಿತ ಮುಖಗಳೊಂದಿಗೆ ಅಪರಿಚಿತ ಮುಖಗಳು ನಮ್ಮ ಕನಸಿನಲ್ಲಿ ಹಾದು ಏನೂ ಅಥ೯ವಾಗದ ರೀತಿಯಲ್ಲಿ ನಮ್ಮನ್ನು ಗೊಂದಲಕ್ಕೀಡಾಗುವಂತೆ ಮಾಡುತ್ತವೆ.
ಕನಸಿನ ಸುತ್ತ ಅದೆಷ್ಟೋ ರಹಸ್ಯಗಳು ಅಡಗಿವೆ. ಕನಸುಗಳ ಜೊತೆಗೆ ನಮ್ಮ ಜೀವನವೂ ಸಾಗುವುದಂತು ಸುಳ್ಳಲ್ಲ. ಭಾವನೆಗಳ ಹರಿದಾಟಕ್ಕೆ ಕನಸುಗಳೇ ಮೂಲ.
-ಸರೋಜ ಪಿ ಜೆ ದೋಳ್ಪಾಡಿ
ತೃತೀಯ ಬಿ.ಎ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ