ವಿವೇಕಾನಂದ ಪ. ಪೂ ಕಾಲೇಜಿನ ವತಿಯಿಂದ ಭಾರತೀಯ ಗಡಿಭದ್ರತಾ ಪಡೆಯಲ್ಲಿ ತರಬೇತಿ ಪಡೆಯುತ್ತಿರುವ ರಮ್ಯ ಡಿ ಅವರಿಗೆ ಸನ್ಮಾನ

Upayuktha
0

ಪುತ್ತೂರು: ಭಾರತೀಯ ಗಡಿಭದ್ರತಾ ಪಡೆಯಲ್ಲಿ ತರಬೇತಿ ಪಡೆಯುತ್ತಿರುವ ರಮ್ಯ ಡಿ. ಅವರನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು. ವಿವೇಕಾನಂದ ಪದವಿ ಕಾಲೇಜಿನ ಎನ್.ಸಿ.ಸಿ ಘಟಕದ ಅಧಿಕಾರಿ ಅತುಲ್ ಶೆಣೈ ರವರು ರಮ್ಯ ಡಿ. ರವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. 


ಇವರು ತಮ್ಮ ಪಿಯುಸಿ ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ 2014-2016ರಲ್ಲಿ ಪಡೆದು ಬಳಿಕ ಪದವಿ ಶಿಕ್ಷಣವನ್ನು ವಿವೇಕಾನಂದ ಪದವಿ ಕಾಲೇಜಿನಲ್ಲಿ ಪೂರೈಸಿದರು. ಈಕೆ ಶಾಲಾ ದಿನಗಳಲ್ಲೆ ಎನ್.ಸಿ.ಸಿಯಲ್ಲಿ ಸಕ್ರಿಯರಾಗಿದ್ದರು. ಇವರು ಬಲ್ನಾಡು ಗ್ರಾಮದ ದೇವಸ್ಯ ಪರಜಾಲು ಪದ್ಮಯ್ಯ ಗೌಡ ಮತ್ತು ತೇಜವತಿಯವರ ಪುತ್ರಿ. ಪ್ರಸ್ತುತ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಟ್ರೆನಿಂಗ್ ತರಬೇತಿಯನ್ನು ಪಡೆಯುತ್ತಿದ್ದಾರೆ.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಹೇಶ ನಿಟಿಲಾಪುರ, ಉಪನ್ಯಾಸಕ ಮುರಳಿ ಪಿ.ಜಿ, ಜಯಗೋವಿಂದ ಶರ್ಮ, ದೇವಿಚರಣ್, ಭೀಮ ಭಾರದ್ವಾಜ್, ಜ್ಯೋತಿ ಕುಮಾರಿ, ಮಾಧವೀ ಪಟೇಲ್, ಚೈತ್ರಾ ಮೊದಲಾದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top