ವಿವೇಕಾನಂದ ಪದವಿ ಮಹಾವಿದ್ಯಾಲಯದ ನೂತನ ಆಡಳಿತ ಮಂಡಳಿಯ ಪದಗ್ರಹಣ

Upayuktha
0

ಅಧ್ಯಕ್ಷರಾಗಿ ಡಾ. ಶ್ರೀಪತಿ ಕಲ್ಲೂರಾಯ ಸಂಚಾಲಕರಾಗಿ ಮುರಳಿಕೃಷ್ಣ ಕೆ ಎನ್ ಜವಾಬ್ದಾರಿ ಸ್ವೀಕಾರ



ಪುತ್ತೂರು: ಇಲ್ಲಿನ ವಿವೇಕಾನಂದ ಪದವಿ ಮಹಾವಿದ್ಯಾಲಯದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಬುಧವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕರಾಗಿ ಪುತ್ತೂರಿನ ಖ್ಯಾತ ಯುವ ನ್ಯಾಯವಾದಿ ಮುರಳಿಕೃಷ್ಣ ಕೆ ಎನ್ ಜವಾಬ್ದಾರಿ ಸ್ವೀಕರಿಸಿದರು.


ಡಾ. ಶ್ರೀಪತಿ ಕಲ್ಲೂರಾಯ ಇವರು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಅರ್ಥಶಾಸ್ತ್ರ ಪ್ರೊಫೆಸರ್ ಆಗಿ, ಗೈಡ್ ಆಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ. ವಿವೇಕಾನಂದ ಕಾಲೇಜಿನ ಹಾಗೂ ಕಾನೂನು ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿರುವ ಮುರಳಿಕೃಷ್ಣ ಕೆ ಎನ್ ಇವರು ಪುತ್ತೂರಿನ ಹೆಸರಾಂತ ವಕೀಲರಾದ ರಾಮ್ ಮೋಹನ್ ರಾವ್ ಅವರೊಂದಿಗೆ ಇದ್ದು ವಕೀಲ ವೃತ್ತಿ ನಡೆಸಿಕೊಂಡು ಬರುತ್ತಿದ್ದಾರೆ. ಬೇರೆ ಬೇರೆ ಸಂಘಟನೆ, ಸಂಘ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾದ ಇವರು ಭಾಜಪದ ಪ್ರಮುಖ ಹುದ್ದೆಗಳಲ್ಲಿ ಕೂಡ ಇದ್ದರು. ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಇವರೊಂದಿಗೆ ಕೋಶಾಧಿಕಾರಿಯಾಗಿ ಶ್ರೀನಿವಾಸ ಸಾಮಂತ ಮತ್ತು ಸದಸ್ಯರಾಗಿ ಅನಂತಕೃಷ್ಣ  ನಾಯಕ್‌, ಜಗನ್ನಾಥ, ಶಂಕರ್ ಜೋಯಿಸ ಯರ್ಮುಂಜ, ಸುಕುಮಾರ ಕೊಡಿಪ್ಪಾಡಿ, ಶೋಭಾ ಕೊಳತ್ತಾಯ, ಶುಭಾ ಅಡಿಗ ಜವಾಬ್ದಾರಿ ಸ್ವೀಕರಿಸಿದರು. ವಿದ್ಯಾವರ್ಧಕ ಸಂಘದ ನಿರ್ದೇಶಕ ಶಿವಪ್ರಸಾದ್ ಇ ಇವರು ನೂತನ ಸದಸ್ಯರುಗಳನ್ನು ಪರಿಚಯಿಸಿ ದೀಪ ಪ್ರದಾನ ಮಾಡಿ, ಸೇವಾ ದೀಕ್ಷೆಯನ್ನು ನೀಡಿ ಜವಾಬ್ದಾರಿ ನೀಡಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣು ಗಣಪತಿ ಭಟ್ ವಂದಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top