ಮೆಟ್ರೋ ಫೀಡರ್ ಬಸ್ ಸೇವೆಯು ತಡರಾತ್ರಿ ತನಕ ವಿಸ್ತರಣೆ

Upayuktha
0

 


ಬೆಂಗಳೂರು : ಪ್ರಮುಖ ಮೆಟ್ರೊ ರೈಲು ನಿಲ್ದಾಣಗಳಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಫೀಡರ್ ಬಸ್‌ಗಳ ಸೇವೆಯನ್ನು ಬಿಎಂಟಿಸಿ ಯು ತಡರಾತ್ರಿಯ ವರೆಗೆ ವಿಸ್ತರಣೆ ಮಾಡಿದೆ.


ಎಸ್‌.ವಿ.(ಸ್ವಾಮಿ ವಿವೇಕಾನಂದ) ಮೆಟ್ರೊ ನಿಲ್ದಾಣದಿಂದ ಧೂಪನಹಳ್ಳಿ ಹಾಗೂ ಕೋರಮಂಗಲ ಮಾರ್ಗದಲ್ಲಿ ಸಿಲ್ಕ್ ಬೋರ್ಡ್, ಎಸ್‌.ವಿ. ಮೆಟ್ರೊ ನಿಲ್ದಾಣದಿಂದ ಕೆ.ಆರ್‌.ಪುರ ಮತ್ತು ಹೂಡಿ ರೈಲು ನಿಲ್ದಾಣ ಮಾರ್ಗದಲ್ಲಿ ವೈಟ್‌ಫೀಲ್ಡ್ ಟಿಟಿಎಂಸಿ, ವಿಜಯನಗರ ಮೆಟ್ರೊ ನಿಲ್ದಾಣದಿಂದ ಚಂದ್ರ ಲೇಔಟ್‌ ಹಾಗೂ ನಾಗರಬಾವಿ ಮಾರ್ಗದಲ್ಲಿ ಅಂಬೇಡ್ಕರ್ ಕಾಲೇಜು, ರಾಜರಾಜೇಶ್ವರಿನಗರ ಮೆಟ್ರೊ ನಿಲ್ದಾಣದಿಂದ ಬೆಂಗಳೂರು ವಿಶ್ವವಿದ್ಯಾಲಯದ ಮಾರ್ಗದಲ್ಲಿ ಬಿಇಎಂಎಲ್ 5ನೇ ಹಂತಕ್ಕೆ ಫೀಡರ್‌ ಬಸ್‌ಗಳ ಅವಧಿಯನ್ನು ವಿಸ್ತರಿಸಲಾಗಿದೆ.


ಜ್ಞಾನಭಾರತಿ ಮೆಟ್ರೊ ನಿಲ್ದಾಣದಿಂದ ಉಲ್ಲಾಳು ಉಪನಗರ, ಜಾಲಹಳ್ಳಿ ಮೆಟ್ರೊ ನಿಲ್ದಾಣದಿಂದ ಟಿವಿಎಸ್ ಕ್ರಾಸ್ ಮಾರ್ಗದಲ್ಲಿ ಪೀಣ್ಯ 2ನೇ ಹಂತ, ನಾಗಸಂದ್ರ ಮೆಟ್ರೊ ನಿಲ್ದಾಣದಿಂದ ದಾಸರಹಳ್ಳಿ ಚಿಕ್ಕಬಾಣಾವರ, ಜಯನಗರ ಮೆಟ್ರೊ ನಿಲ್ದಾಣದಿಂದ ಜಯನಗರ 5ನೇ ಬ್ಲಾಕ್, ಪುಟ್ಟೇನಹಳ್ಳಿ, ಕೊತ್ತನೂರು ದಿಣ್ಣೆ ಮಾರ್ಗದಲ್ಲಿ ಜಂಬುಸವಾರಿ ದಿಣ್ಣೆ, ರೇಷ್ಮೆ ಸಂಸ್ಥೆ ಮೆಟ್ರೊ ನಿಲ್ದಾಣದಿಂದ ಅಗರ ಗೇಟ್ ಮತ್ತು ಉದಯಪಾಳ್ಯ ಮಾರ್ಗದಲ್ಲಿ ಕಗ್ಗಲಿಪುರಕ್ಕೆ ಫೀಡರ್‌ ಬಸ್‌ಗಳ ಕಾರ್ಯಾಚರಣೆಯನ್ನು ತಡರಾತ್ರಿ ತನಕ ವಿಸ್ತರಣೆ ಮಾಡಲಾಗಿದೆ ಎಂಬುದಾಗಿ ಬಿಎಂಟಿಸಿ ಮಾಹಿತಿಯನ್ನು ನೀಡಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top