ಅಗಲಿದ ಗೃಹರಕ್ಷಕನ ಮನೆಗೆ ಭೇಟಿ

Upayuktha
0


 

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ, ಮಂಗಳೂರು ಘಟಕದ ಗೃಹರಕ್ಷಕರಾದ ಸಂತೋಷ್ ಕಟೀಲ್ ಅವರು ದಿನಾಂಕ 17-11-2021 ರಂದು ಕಿನ್ನಿಗೋಳಿ ಪರಿಸರದ ಶಾಲೆಯ ಮಕ್ಕಳಿಗೆ ಕಣಜದ ಹುಳುಗಳು ಕಡಿದು ಗಂಭೀರಾವಸ್ಥೆಯಲ್ಲಿರುವ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಸಂದರ್ಭದಲ್ಲಿ ಅವರಿಗೂ ಕೂಡ ಕಣಜದ ಹುಳು ಕಚ್ಚಿದ್ದು, ಇವರು ಚಿಕಿತ್ಸೆಯನ್ನು ಪಡೆಯದೆ ಆ ದಿನ ರಾತ್ರಿ ಮೃತಹೊಂದಿರುತ್ತಾರೆ.  


ಇವರ ಮನೆಗೆ ದಿನಾಂಕ 19-11-2021ನೇ ಶುಕ್ರವಾರದಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ. ಮುರಲೀಮೋಹನ್ ಚೂಂತಾರು ಮತ್ತು ಉಪಸಮಾದೇಷ್ಟರಾದ ಶ್ರೀ ರಮೇಶ್, ಗೃಹರಕ್ಷಕರಾದ ದಿವಾಕರ್, ದುಷ್ಯಂತ್, ಸುನೀಲ್ ಕುಮಾರ್ ಹಾಗೂ ಜ್ಞಾನೇಶ್ ಇವರು ಭೇಟಿ ನೀಡಿದರು. ಡಾ. ಮುರಲೀ ಮೋಹನ್ ಚೂಂತಾರು ಅವರು ಸಂತೋಷ್ ಅವರ ಮನೆಯವರಿಗೆ ಸಾಂತ್ವಾನ ಮಾಡಿದರು.


ಅವರು ದಕ್ಷ, ಪ್ರಾಮಾಣಿಕ ದಿಟ್ಟ ಗೃಹರಕ್ಷಕರಾಗಿದ್ದು ಅವರ ಅನಿರೀಕ್ಷಿತ ಸಾವಿನಿಂದ ಗೃಹರಕ್ಷಕ ಇಲಾಖೆಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಸಮಾದೇಷ್ಟರು ನುಡಿದರು. ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆಯಿಂದ ಹಾಗೂ ಗೃಹ ರಕ್ಷಕದಳ ಇಲಾಖೆಯಿಂದ 25,000 ರೂ. ಸಹಾಯಧನವನ್ನು ನೀಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top