ಬಲು ವಿಚಿತ್ರ ಮನುಜನಾಸೆ
ಕೂಡಿ ಇಡುವ ಬೃಹದ್ದಾಸೆ
ಕೂಡಿ ಕೂಡಿ ಕಳೆದುಕೊಂಡ
ಜೀವಿತಾರ್ಧವ.....
ಧನಕನಕವು, ಅಧಿಕಾರವು
ದಿನನಿತ್ಯವು ಅನುಭವಿಸುತ
ತೃಪ್ತಿ ಎನಿತು ಇರದಂಥಹ
ಸ್ವಾರ್ಥ ಬೇಡವೋ...
ಏನಿದ್ದರು ಬೇಕು ಎಂಬ
ಮನುಜ ಕೂಡ ಎರಡು ಬಾರಿ
ಸಾಕು ಸಾಕು ಸಾಕು ಎಂದು
ಬೊಬ್ಬೆ ಹೊಡೆವನು....
ಹೊಟ್ಟೆ ಬಿರಿಯ ಉಣ್ಣುವಾಗ
ಬೆನ್ನಿಗೇಟು ಬೀಳುವಾಗ
ಇಷ್ಟೆ ಸಾಕು ಬೇಡ ಬೇಡ
ಎಂದು ಹೇಳನೇ....????
-ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ