ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ

Upayuktha
0


ಕಾಯಕವೇ ಕೈಲಾಸವೆಂದರಿತ ವಂದನೀಯ

ನಮ್ಮ ಪ್ರೀತಿಯ ಹರೇಕಳ ಹಾಜಬ್ಬ ಮಹನೀಯ


ಮುಗ್ಧ ಹೃದಯ ಶ್ರೀಮಂತಿಕೆಯ ಗುಣವಂತ

ಕುರಿತೋದದೆಯು ಸಾಧಕರೆನಿಸಿದ ಅಕ್ಷರ ಸಂತ


ಬಡತನ ಬೇಗೆಯಲಿ ಛಲದಿ ನೀ ಬೆಳೆದೆ

ಪರೋಪಕಾರಾರ್ಥ ಗುಣವ ನೀ ಕಲಿಸಿದೆ


ಸಾಮಾನ್ಯರಲ್ಲಿ ನೀ ಅಸಾಮಾನ್ಯರೆನಿಸಿದ ಸಜ್ಜನ

ಜಗಕೆ ತೋರಿದೆ ನೀನು ಆದರ್ಶ ಸುಜ್ಞಾನ


ವಿದ್ಯೆಯ ಶ್ರೇಷ್ಠತೆ ಜಗಕೆ ಸಾರಿದ ಮಹಾನುಭಾವ

ತನ್ನೂರಿಗೆ ನೀಗಿಸಿದೆ ವಿದ್ಯಾದೇಗುಲದ ಅಭಾವ


ಕನಸು ನನಸಾಗಿಸುತ ತೆರೆದೆಯೊಂದು ಶಾಲೆ

ತೊಡಿಸಿದರು ರಾಷ್ಟ್ರಪತಿಗಳಿಂದು ಪದ್ಮಶ್ರೀ ಮಾಲೆ


ಕಿತ್ತಾಳೆ ಬೇಕೇ ಕಿತ್ತಾಳೆ ಕರೆದೆ ನೀ ಹಾಕಿ ಚಪ್ಪಾಳೆ

ದೇಶಾದ್ಯಾಂತ ಇಂದು ಅಭಿನಂದನೆಯ ಸುರಿಮಳೆ


ಅಂದಿನಿಂದಲೂ ಹೀಗೆಯೇ ಇಂದು ಹಾಗೆಯೇ..

ಸರಳತೆಯ ವ್ಯಕಿತ್ವದಲಿ ನಿನಗಾರು ಸಾಟಿಯೇ..


ಕೈ ಮುಗಿದೆ  ಗಣ್ಯರಿಗೆ ಬಡಮಕ್ಕಳ ವಿದ್ಯೆಗಾಗಿ

ನಡೆದೆ  ಜನಮಾನಸರೆಡೆಗೆ ಶಾಲೆಯ ನೆರವಿಗಾಗಿ


ಬಯಸಲಿಲ್ಲ ಎಂದೂ ನೀ ಸನ್ಮಾನ ಪ್ರಶಸ್ತಿಯನು

ನೀಡಿದೆ ಸದಾ ಮಕ್ಕಳ ಕಲಿಕೆಗೆ ಪ್ರಾಶಸ್ತ್ಯ ವನು


ಮರೆತಿಲ್ಲ ಭಾರತೀಯರು ನಿನ್ನ ಸಾಧನೆಯನು

ಗೌರವಿಸಿತಿಂದು ನಿನ್ನ ಬದುಕಿನ ಸಾರ್ಥಕತೆಯನು


-ಗಣೇಶ್ ಜಾಲ್ಸೂರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Tags

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top