ಮಂಗಳೂರು ವಿವಿ: ‘ಕನಕಾಭಿಯಾನ’ ಸಮಾರೋಪ; ನ.23 ರಂದು ಕನಕಜಯಂತಿ, ಬಹುಮಾನ ವಿತರಣೆ

Upayuktha
0

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರ ನವೆಂಬರ್ 16ರಿಂದ 20 ರವರೆಗೆ ವಿಶ್ವವಿದ್ಯಾನಿಲಯ ದತ್ತು ಸ್ವೀಕರಿಸಿದ ಹತ್ತು ಶಾಲೆಗಳಲ್ಲಿ ಏರ್ಪಡಿಸಿದ್ದ 'ಕನಕಾಭಿಯಾನ' ಕಾರ್ಯಕ್ರಮ ಮುಕ್ತಾಯಗೊಂಡಿದೆ. 


ಅಭಿಯಾನದ ಭಾಗವಾಗಿ ಕನಕದಾಸರ ಬದುಕು ಮತ್ತು ಸಾಹಿತ್ಯದ ಕುರಿತು ಉಪನ್ಯಾಸ ಮತ್ತು ರಸಪ್ರಶ್ನೆ ಕಾರ್ಯಕ್ರಮ ನಡೆಯಿತು. ಹರೇಕಳ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ ಕೆ ಅವರಿಂದ ಉದ್ಘಾಟನೆಗೊಂಡ ಕಾರ್ಯಕ್ರಮ ಸರಣಿಯಲ್ಲಿ, ದ.ಕ.ಜಿ.ಪಂ. ಸ.ಹಿ.ಪ್ರಾ.ಶಾಲೆ ಕೊಣಾಜೆ ಪದವು, ದ.ಕ ಜಿ.ಪಂ ಸರಕಾರಿ ಪ್ರೌಢಶಾಲೆ ಕೊಣಾಜೆ ಪದವು, ಸರಕಾರಿ ಪ್ರಾಥಮಿಕ ಶಾಲೆ ಕುಂಟಲಗುಳಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜಗುಡ್ಡೆ, ಸರಕಾರಿ ಪ್ರೌಢಶಾಲೆ ನ್ಯೂಪಡ್ಪು, ಸರಕಾರಿ ಪ್ರೌಢಶಾಲೆ ಪಾವೂರು, ಸರಕಾರಿ ಪ್ರಾಥಮಿಕ ಶಾಲೆ ಇನೋಳಿ, ಸರಕಾರಿ ಪ್ರಾಥಮಿಕ ಶಾಲೆ ಮಂಜನಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ, ಕನಕದಾಸ ಕೇಂದ್ರದ ಸಂಶೋಧನಾ ಸಹಾಯಕ ಆನಂದ ಎಂ. ಕಿದೂರು, ವಿವಿಯ ಕನ್ನಡ ಸಂಶೋಧನಾರ್ಥಿಗಳಾದ ನವ್ಯಶ್ರೀ. ಎಸ್, ಚಂದನಾ ಕೆ.ಎಸ್, ನಮಿತಾ, ಕನಕದಾಸರ ಕುರಿತು ಉಪನ್ಯಾಸ ನೀಡಿದರು. 


ಈ ಅಭಿಯಾನದ ವಿವಿಧೆಡೆಗಳಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬ, ದತ್ತು ಸ್ವೀಕೃತ ಶಾಲೆಗಳ ಸಂಯೋಜಕ ಪ್ರೊ. ಪ್ರಶಾಂತ್ ನಾಯ್ಕ್, ಸ್ಟೇಟ್ ಬ್ಯಾಂಕ್ ಅಧಿಕಾರಿಗಳಾದ ಮನೋಹರ್, ಮಹೇಶ್, ಗ್ರಾಮ ಪಂಚಾಯತ್ ಸದಸ್ಯೆ ಖತೀಜಾ ಬಾನು, ಅಚ್ಯುತ ಗಟ್ಟಿ, ಯಕ್ಷಗಾನ ಅರ್ಥಧಾರಿ ವಿದ್ಯಾಧರ ಶೆಟ್ಟಿ, ಊರ ಗಣ್ಯರಾದ ಜಯರಾಮ ಆಳ್ವ, ಇಬ್ರಾಹಿಂ ಕೊಣಾಜೆ ಪದವು, ತ್ಯಾಗಂ ಹರೇಕಳ ನೋಡಲ್ ಅಧಿಕಾರಿಗಳಾದ ಮಂಗಳೂರು ವಿವಿಯ ಡಾ. ಗೋವಿಂದ ರಾಜು, ವಿಶೇಷಾಧಿಕಾರಿ ಶೇಖರ್ ನಾಯ್ಕ್, ಡಾ. ಪರಮೇಶ್ವರ, ಡಾ.ಸಬಿತಾ, ಡಾ. ನರಸಿಂಹಯ್ಯ ,ಡಾ. ವಿಶ್ವನಾಥ್, ನವೀನ್ ಚಂದ್ರ ಭಾಗವಹಿಸಿದ್ದರು. ಅಭಿಯಾನ ನಡೆದ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಉಷಾಲತಾ, ರೂಪ ಎಂ.ಪಿ, ಕರುಣ ಎಸ್, ಚಂಚಲಾಕ್ಷಿ, ಸುಶೀಲಾಬಾಯಿ, ಮೀನಾ ಗಾಂವ್ಕರ್, ಮುಕ್ತ, ಆಲಿಸ್ ವಿಮಲಾ, ಸೈಲಿಯಾ ಮಿನೇಗಸ್, ಪರ್ಜಾನ ಪಾಲ್ಗೊಂಡಿದ್ದರು.


ನ.23 ರಂದು ವಿವಿಯಲ್ಲಿ ಕನಕ ಜಯಂತಿ, ಬಹುಮಾನ ವಿತರಣೆ

ನ. 23ರಂದು ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕನಕ ಜಯಂತಿ ಪ್ರಯುಕ್ತ ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣ ಕಾರ್ಯಕ್ರಮ ನಡೆಯಲಿದೆ. ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾಂಸರಾದ ಪ್ರೊ. ಎ.ವಿ ನಾವಡ, 'ಕನಕದಾಸರ ಕಾವ್ಯ: ಕನ್ನಡ ಸಾಂಸ್ಕೃತಿಕ ಅಭಿವ್ಯಕ್ತಿ' ಎಂಬ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಚೈತ್ರ ಕೊಪ್ಪಳ ಇವರಿಂದ ಕನಕ ಗೀತ ಸಂಭ್ರಮ ಕಾರ್ಯಕ್ರಮವಿದೆ. ಕನಕಾಭಿಯಾನದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬಹುಮಾನ ವಿಜೇತರಾದ 44 ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಯೋಜಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top