ಸಕಲೇಶಪುರ: ಬಾಳು ಪೇಟೆಯ ಭತ್ತದ ಗದ್ದೆಗಳಿಗೆ ಆನೆ ಹಿಂಡು ಲಗ್ಗೆ

Upayuktha
0

ಅರ್ಧ ಬೆಳೆ ಮಳೆಯಿಂದ ಹಾಳು; ಇನ್ನರ್ಧ ಆನೆಗಳ ಪಾಲು; ರೈತನಿಗೆ ತಪ್ಪದ ಗೋಳು



ನೋಡಿ ಈ ವೀಡಿಯೋ ತುಣುಕು. ಸಕಲೇಶಪುರ ತಾಲೂಕು ಬಾಳು ಪೇಟೆಯಲ್ಲಿ ಭತ್ತದ ಗದ್ದೆಗಳಿಗೆ ನುಗ್ಗಿದ ಆನೆಗಳ ಹಿಂಡು ಇದು. ಸುಮಾರು 40ಕ್ಕೂ ಹೆಚ್ಚು ಆನೆಗಳು 50 ಎಕರೆ ಪ್ರದೇಶದಲ್ಲಿ ಭತ್ತದ ಗದ್ದೆಗಳನ್ನು ಹಾಳುಗೆಡಹಿವೆ. ಈ ದೃಶ್ಯ ನೋಡುವಾಗ ಎಂಥವರಿಗೂ ಅನ್ನದಾತರ ಸಂಕಷ್ಟದ ಕರುಳು ಚುರ್ ಎನ್ನದೆ ಇರಲಾರದು.


ಅಕಾಲಿಕ ಮಳೆಯಿಂದ ಮೊದಲೇ ಅಪಾರ ನಷ್ಟ ಅನುಭವಿಸುತ್ತಿರುವ ರೈತರಿಗೆ ಆನೆಗಳ ದಾಳಿ ಇನ್ನಷ್ಟು ಸಂಕಟ ತಂದೊಡ್ಡಿದೆ. ಮಳೆಯಿಂದಾಗಿ ಮೊಳಕೆಯೊಡೆದಿರುವ ತೆನೆಗಳು ಆನೆಗಳಿಗಾದರೂ ಆಹಾರವಾಗಲಿ ಎಂದು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುವ ಪರಿಸ್ಥಿತಿ ಇಲ್ಲಿನ ರೈತರದ್ದು.


ಪರಿಸರ- ವನ್ಯಮೃಗಗಳು ಮತ್ತು ರೈತರ ಹಿತಾಸಕ್ತಿಗಳ ನಡುವೆ ಸಮತೋಲನ ಏರ್ಪಡಿಸುವ ತುರ್ತು ಅಗತ್ಯವಿದ್ದು, ಕಾಡಿನಂಚಿನ ಪ್ರದೇಶಗಳಲ್ಲಿ ಕೃಷಿ ವಿಸ್ತರಣೆಗೆ ಅವಕಾಶ ನೀಡಬಾರದು. ಅಂತೆಯೇ ಈಗ ಕೃಷಿ ನಡೆಸುತ್ತಿರುವ ರೈತರಿಗೆ  ವಿವಿಧ ಇಲಾಖೆಗಳಿಂದ ಕಾನೂನಾತ್ಮಕ ತೊಂದರೆಗಳಾಗದಂತೆ, ವನ್ಯಜೀವಿಗಳಿಂದ ಹಾನಿ ಉಂಟಾಗದಂತೆ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.


ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಬೆಳೆಗಳ ರಕ್ಷಣೆಗೆ ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಿದೆ.




(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top