ನಾನು ಕಂಡ ಶ್ರೀನಾಥ್, ಕನ್ನಡ ಸಾಹಿತ್ಯ ಪರಿಷತ್‌ ದ.ಕ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ

Upayuktha
0


 


ಬೆಳೆವ ಸಿರಿಯನ್ನು ಮೊಳಕೆಯಲ್ಲಿ ನೋಡು ಎಂಬ ಮಾತಿನಂತೆ ಶ್ರೀನಾಥ್‌ರವರು ಬಾಲ್ಯದಿಂದಲೇ ನಾಯಕತ್ವ ಗುಣವನ್ನು ರೂಡಿಸಿಕೊಂಡವರು. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಬಹಳಷ್ಟು ಜನಪ್ರಿಯರಾಗಿದ್ದರು.


ಇವರ ಸ್ವಭಾವದ ಬಗ್ಗೆ ಹೇಳುವುದಾದರೆ ಸೌಮ್ಯ ಸ್ವಭಾವ ಮೃದು ಹೃದಯಿ ಮತ್ತು ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ. ಚಿಕ್ಕ ಕೆಲಸಮಾಡಿದರೆ ದೊಡ್ಡದಾಗಿ ಹೇಳಿಕೊಳ್ಳುವ ಡಂಭಾಚಾರದ ವ್ಯಕ್ತಿಗಳ ನಡುವೆ ಕೆಲಸ ಮಾಡಿಯೂ ಅದನ್ನು ಹೇಳಿಕೊಳ್ಳದೆ ಇರುವ ಸರಳ ಸಜ್ಜನಿಕೆಯ ವ್ಯಕ್ತಿ.


ತಮ್ಮ ಕಾರ್ಯವ್ಯಾಪ್ತಿಯನ್ನು ಬರೀ ಸಾಹಿತ್ಯ ರಂಗಕ್ಕೆ ಸೀಮಿತವಿಡದ ಶ್ರೀನಾಥ್ ಯಾವುದೇ ರಂಗದ ಕೆಲಸಗಳ ಜವಾಬ್ದಾರಿ ಕೊಟ್ಟರೂ ಅದನ್ನು ಬಹಳ ಯಶಸ್ವಿಯಾಗಿ ನಿರ್ವಹಿಸಿದ ದಾಖಲೆ ಇದೆ. ಪೂಜ್ಯ ಶ್ರೀಯುತ ವೀರೇಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ನಡೆದ ಹಲವು ಕಾರ್ಯಕ್ರಮಗಳ ಉಸ್ತುವಾರಿಯನ್ನು ವಹಿಸಿದ ಶ್ರೀನಾಥ್ ಬಹಳಷ್ಟು ಸಲ ಹೆಗ್ಗಡೆಯವರಿಂದ ಅವರ ಕಾರ್ಯಕ್ಷಮತೆಗೆ ಶ್ಲಾಘನೆ ಪಡೆದಿದ್ದಾರೆ.


ಎಂ.ಪಿ ಶ್ರೀನಾಥ್ ಮೊದಲಿನಿಂದಲೂ ಕನ್ನಡ ಸಾಹಿತ್ಯ ಪರಿಷತ್ ನ ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡವರು. ಹಾಗೂ ಹೆಸರು ಪ್ರತಿಷ್ಠೆಗಾಗಿ ದುಡಿಯುವವರ ಮುಂದೆ ಇವರು ವಿಭಿನ್ನ ಅಂದುಕೊಳ್ಳಬಹುದು.


ಇವರನ್ನು ಬಹಳ ಹತ್ತಿರದಿಂದ ಬಲ್ಲ ನಾನು ಇವರ ಬಗ್ಗೆ ಹೇಳುವುದಾದರೆ "ತಾನು ಮಾಡಿದೆ ಕೆಲಸಕ್ಕೆ ಯಾವುದೇ ಫಲಾಪೇಕ್ಷೆ ಬಯಸದೆ, ತನಗೆ ವಹಿಸಿದ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡುವ ಉತ್ತಮ ನಾಯಕತ್ವ ಗುಣವಿರುವ ಅಪರೂಪದ ವ್ಯಕ್ತಿ".


ತಾವು ಮಾಡುವ ಸಮಾಜಮುಖಿ ಕೆಲಸಗಳ ಬಗ್ಗೆ ಅವರು ಎಂದೂ ಯಾರಲ್ಲೂ ಹೇಳಿಕೊಳ್ಳದೆ ಇರುವ ಕಾರಣ ನಾನು ಇಂದು ಅವರ ಬಗ್ಗೆ ನಿಮಗೆ ಕೆಲವು ಮಾಹಿತಿ ಕೊಟ್ಟು ಅವರಂತಹ ಪ್ರಾಮಾಣಿಕ ವ್ಯಕ್ತಿಗೆ ಇನ್ನಷ್ಟು ಒಳ್ಳೆಯ ಕೆಲಸವನ್ನು ಮಾಡಲು ಅವಕಾಶ ಮಾಡಿಕೊಡಿ ಎಂದು ಬೇಡಿಕೊಳ್ಳಲು ಇದನ್ನು ಬರೆಯುತ್ತಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿ ಬೇರುಬಿಟ್ಟಿರುವ ಹುಳುಕನ್ನು ತೆಗೆದುಹಾಕಿ ಸಾಹಿತ್ಯದಲ್ಲಿ ಕ್ರಾಂತಿಮಾಡುವ ಹುಮ್ಮನಸಿನಲ್ಲಿ ಇರುವ ಶ್ರೀನಾಥ್ ರವರೇ ನನ್ನ ಆಯ್ಕೆ ಹಾಗೆ ನಿಮ್ಮ ಆಯ್ಕೆಯೂ ಆಗಿರಲಿ.


ಯಾರು ಯಾವುದೇ ಸಮಯದಲ್ಲಿ ಕಾಲ್ ಮಾಡಿದರೂ ಅಷ್ಟೇ ಬಹಳ ತಾಳ್ಮೆಯಿಂದ ನಿಮ್ಮ ಮಾತುಗಳನ್ನು ಆಲಿಸಿ ನಿಮಗೆ ಸಹಾಯ ಮಾಡುವ ವಿಶೇಷ ಸ್ವಭಾವ ಶ್ರೀನಾಥ್ ರವರದು. 


ಬಹುಶಃ ಒಬ್ಬ ನಾಯಕನಾಗುವುದಕ್ಕೆ ಬೇಕಾದ ಗುಣ ಇವರಿಗೆ ರಕ್ತಗತವಾಗಿ ಬಂದಿದೆ. ಶ್ರೀನಾಥ್‌ರವರು ಈವರೆಗೆ ಮಾಡಿದ ಉತ್ತಮ ಕಾರ್ಯಗಳಿಗೆ ಅವರನ್ನು ಬೆಂಬಲಿಸಿ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಶ್ರೀನಾಥ್ ಎಂ.ಪಿ ಯವರಿಗೆ ನಿಮ್ಮ ಮತವನ್ನು ನೀಡಬೇಕಾಗಿ ಎಲ್ಲರಲ್ಲೂ ಕಳಕಳಿಯ ವಿನಂತಿ.


-ಪದ್ಮಲತಾ ಮೋಹನ್

ಲೇಖಕಿ, ಉಪನ್ಯಾಸಕಿ

ಬೆಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top