ಮೂಡಬಿದ್ರೆ: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಮೂಡಬಿದ್ರೆ ಘಟಕದ ನೂತನ ಕಛೇರಿ ಉದ್ಘಾಟನಾ ಕಾರ್ಯಕ್ರಮವು ದಿನಾಂಕ: 14-11-2021 ಭಾನುವಾರದಂದು ಪೂರ್ವಾಹ್ನ 9:00 ಗಂಟೆಗೆ ನಾಡಕಛೇರಿ ಕಟ್ಟಡ, ಮೂಡಬಿದ್ರೆ ಇಲ್ಲಿ ನಡೆಯಲಿರುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಮುಲ್ಕಿ ಮೂಡಬಿದ್ರೆ ಜನಪ್ರಿಯ ಶಾಸಕ ಮಾನ್ಯ ಉಮಾನಾಥ್ ಕೋಟ್ಯಾನ್ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಹಾಗೂ ಪೌರರಕ್ಷಣಾ ಪಡೆಯ ಮುಖ್ಯಪಾಲಕ ಡಾ. ಮುರಲೀ ಮೋಹನ್ ಚೂಂತಾರು ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಪುಟ್ಟರಾಜು, ತಹಶೀಲ್ದಾರರು, ಮೂಡಬಿದ್ರೆ, ಶ್ರೀ ದಿನೇಶ್ ಕುಮಾರ್, ವೃತ್ತನಿರೀಕ್ಷಕರು, ಮೂಡಬಿದ್ರೆ ಪೊಲೀಸ್ ಠಾಣೆ, ಶ್ರೀ ರಮೇಶ್, ಉಪಸಮಾದೇಷ್ಟರು, ಗೃಹರಕ್ಷಕ ದಳ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಹೆಚ್ಚುವರಿ ಉಡುಪಿ ಜಿಲ್ಲೆ, ಶ್ರೀ ಪ್ರಸಾದ್ ಕುಮಾರ್, ಪುರಸಭಾ ಅಧ್ಯಕ್ಷರು, ಮೂಡಬಿದ್ರೆ ಇವರು ಆಗಮಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಎಲ್ಲಾ ಘಟಕದ ಘಟಕಾಧಿಕಾರಿಗಳು ಹಾಗೂ ಗೃಹರಕ್ಷಕರುಗಳು ಭಾಗವಹಿಸಲು ಮುಕ್ತ ಆಹ್ವಾನವನ್ನು ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ