ಮಂಗಳೂರು: ನಗರದ ಪ್ರಸಿದ್ದ ಮಸಾಲೆ ತಯಾರಿಕೆ ಕಂಪೆನಿ "ಅರುಣ ಮಸಾಲೆ ಸಂಸ್ಥೆಯ ಆ್ಯಪ್" ಅನ್ನು ಇಂದು ನಗರದ ಫಿಜಾ ಮಾಲ್ ನಲ್ಲಿ ನಡೆದ ಸಮಾರಂಭದಲ್ಲಿ ತುಳು ಚಿತ್ರ ನಟ ಅರ್ಜುನ್ ಕಾಪಿಕಾಡ್ ಬಿಡುಗಡೆಗೊಳಿಸಿದರು. ಆ್ಯಪ್ ಬಿಡುಗಡೆ ಮಾಡಿ ಮಾತನಾಡಿದ ಅರ್ಜುನ್ ಕಾಪಿಕಾಡ್, ತುಳು ಭಾಷೆಗೆ, ತುಳು ಚಲನಚಿತ್ರಕ್ಕೆ ಸಹಾಯ ಮಾಡಿದ ಅರುಣ ಮಸಾಲ ಸಂಸ್ಥೆಗೆ ಅಬಾರಿಯಾಗಿದ್ದೇನೆ ಎಂದರು. ಅಬತರ ಚಲನ ಚಿತ್ರದ ನಟಿ ಗಾನ ಭಟ್ ರವರು ಅರುಣ ಮಸಾಲೆ ಸಂಸ್ಥೆಗೆ ಶುಭ ಹಾರೈಸಿದರು.
ಅರುಣ ಮಸಾಲ ಸಂಸ್ಥೆಯ ಪಾಲುದಾರರಾದ ಅನಂತೇಶ್ ಪ್ರಭುರವರು "ಅಬತರ" ಚಲನ ಚಿತ್ರ ತಂಡ ತಮ್ಮನ್ನು ಗುರುತಿಸಿದೆ ಅದಕ್ಕಾಗಿ ಅಭಿನಂದನೆಗಳು, ಮುಂದಕ್ಕೂ ಇದೆ ರೀತಿ ಸಹಕಾರವಿರಲಿ ಎಂದು ಹೇಳಿದರು.
ಈ ಸಂಧರ್ಭ ತುಳುಚಿತ್ರ ನಟ ದೇವದಾಸ್ ಕಾಪಿಕಾಡ್, "ಅಬತರ" ತುಳು ಚಿತ್ರದ ನಟಿ ಗಾನ ಭಟ್, ಅನಂತೇಶ ಪ್ರಭು, ಮ್ಯಾನೇಜಿಂಗ್ ಪಾರ್ಟ್ನರ್, ಅರುಣ ಮಸಾಲ ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಅಬತರ" ತುಳು ಚಲನ ಚಿತ್ರದ ಆಡಿಯೋ ರಿಲೀಸ್ ಮಾಡಲಾಯಿತು. ತುಳು ಚಲನ ಚಿತ್ರ "ಅಬತರ"ದ ತಂಡವೂ ಉಭಯ ಜಿಲ್ಲೆ ಮತ್ತು ಹಲವು ಕಡೆ ತನ್ನ ಚಲನಚಿತ್ರಕ್ಕೇ ಪ್ರಚಾರ ಅಭಿಯಾನ ನಡೆಸುತ್ತಿದ್ದು ಅಲ್ಲೆಲ್ಲ ಅರುಣ ಮಸಾಲ ಸಂಸ್ಥೆಯ ಆ್ಯಪ್ ನ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡುತ್ತದೆ. ಅರುಣ ಮಸಾಲ ಸಂಸ್ಥೆ "ಅಬತರ" ಚಲನ ಚಿತ್ರಕ್ಕೆ ಪ್ರಾಯೋಜಕತ್ವ ನೀಡುತಿದೆ ಅಲ್ಲದೆ ತುಳು ಚಿತ್ರ ತಂಡವನ್ನು ಪ್ರೋತ್ಸಾಹಿಸುತ್ತಿದೆ ಎಂದು "ಅಬತರ" ತಂಡದ ಪ್ರವರ್ತಕರು ತಿಳಿಸಿದ್ದಾರೆ.
"ಅರುಣ ಮಸಾಲ ಆ್ಯಪ್"
ಅರುಣ ಮಸಾಲ ಕಂಪನಿಯ ಒಂದು ವಿನೂತನ ತಂತ್ರಾಂಶ, ಮೊಬೈಲ್ ಸಾಧನಗಳಲ್ಲಿ ಮತ್ತು ಟ್ಯಾಬ್ಲೆಟ್, ಕಂಪ್ಯೂಟರ್‍ಗಳಲ್ಲಿ ಸರಳವಾಗಿ ಕೆಲಸ ಮಾಡಲು ವಿನ್ಯಾಸಗೊಳಿಸಲಾಗಿದೆ.
ಬಳಸಳು ಬಹಳ ಸುಲಭವಾಗಿದೆ ಮತ್ತು ಅನುಕೂಲಕರವಾಗಿದೆ.
ಸಿಂಗಲ್ ಟಚ್ ಮೂಲಕ ಆ್ಯಪ್ ಗೆ ಸುಲಭ ಪ್ರವೇಶ.
ಆ್ಯಪ್ನಲ್ಲಿ ಅರುಣ ಮಸಾಲೆಯ ಸಂಪೂರ್ಣ ಮಾಹಿತಿ.
ಇಚ್ಛಿಸಿದ ಮಸಾಲ ಪದಾರ್ಥಗಳನ್ನು ಒಂದೇ ಕ್ಲಿಕ್ನಲ್ಲಿ ಖರೀದಿಸುವ ಅವಕಾಶ.
ತಕ್ಷಣ ಬಯಸಿದ ಸ್ಥಳಕ್ಕೆ ಮುಟ್ಟಿಸುವ ಕಾರ್ಯ. (ದೇಶದ ಯಾವುದೇ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪಿಸಲಾಗುವುದು.ವಿತರಣಾ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ.)
ಆ್ಯಪ್ ಸಂಪೂರ್ಣ ಉಚಿತವಾಗಿದ್ದು ಬಳಸಲು ಯಾವುದೇ ಶುಲ್ಕವಿಲ್ಲ. ಇದು ಎಂದೆಂದಿಗೂ ಉಚಿತವಾಗಿರುತ್ತೆ ಎಂದು ಕಂಪನಿಯು ಖುದ್ದು ಹೇಳಿಕೊಂಡಿದೆ.
ಅರುಣ ಮಸಾಲೆ ಸಂಸ್ಥೆಯ ಬಗ್ಗೆ:
ಮಂಗಳೂರು ನಗರದ ಬೈಕಂಪಾಡಿ ಕೈಗಾರಿಕಾ ಪ್ರಾಂಗಣದಲ್ಲಿ ನೆಲೆಗೊಂಡಿರುವ ಅರುಣಾ ಮಸಾಲೆ ಕಂಪೆನಿ 1980 ರಿಂದ ಜನತೆಗೆ ರುಚಿ ಮತ್ತು ನಂಬಿಕೆಗೆ ಹೆಸರುವಾಸಿಯಾಗಿ ಬೆಳೆದು ಬಂದಿದೆ.
ಅರುಣಾ ಮಸಾಲೆ ಕಂಪೆನಿ ISO 22000:2005 ಪ್ರಮಾಣೀಕರಣ ಪತ್ರವನ್ನು ಪಡೆದ ಕರಾವಳಿ ಕರ್ನಾಟಕದ ಮೊದಲ ಮಸಾಲೆ ಸಂಸ್ಕರಣಾ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಹಾರ ಉತ್ಪನ್ನಗಳ ಅತ್ಯುನ್ನತ ಶ್ರೇಣಿಯ ಮಸಾಲೆ ಪುಡಿಗಳು, ಮಿಶ್ರಿತ ಮಸಾಲೆ ಪುಡಿಗಳು, ತ್ವರಿತ ತಯಾರಿಕೆಯ ಮಿಶ್ರಣಗಳು, ಉಪ್ಪಿನಕಾಯಿ ಮತ್ತು ಶುಂಠಿ,ಬೆಳ್ಳುಳ್ಳಿ ಪೇಸ್ಟ್ ಅನ್ನು ಒಳಗೊಂಡಿದೆ.
ಕರ್ನಾಟಕ, ಮಹಾರಾಷ್ಟ್ರ, ಗೋವಾ ಮತ್ತು ಕೇರಳ, ಹಾಗೆಯೇ ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯ ದೇಶದ ಗ್ರಾಹಕರಿಗೂ ರಫ್ತಾಗುತ್ತಿದೆ.
ಅರುಣಾ ಮಸಾಲೆ ದಕ್ಷಿಣ ಭಾರತದ ಅಗ್ರ ಮಸಾಲೆ ತಯಾರಕರಲ್ಲಿ ಒಂದಾಗಿದೆ, ಅತ್ಯಾಧುನಿಕ ದರ್ಜೆಯ ಮಸಾಲೆ ಉತ್ಪಾದನಾ ಸೌಲಭ್ಯಗಳು, ಸಂಪೂರ್ಣ ಸ್ವಯಂಚಾಲಿತ ಯಂತ್ರಗಳು ಮತ್ತು ಆಂತರಿಕ ಅಲ್ಟ್ರಾ ಮೋಡರ್ನ್ ಪ್ರಯೋಗಾಲಯವನ್ನು ಹೊಂದಿದೆ. ಹಲವು ವರ್ಷಗಳ ಬದ್ಧತೆಯು ಇಂದು ಹಲವು ಕುಟುಂಬದ ನೆಚ್ಚಿನ ಮಸಾಲೆಯಾಗಿ ಗುರುತಿಸಿ ಕೊಂಡಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ