ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

Upayuktha
0

ಮಂಗಳೂರು: ಮೌಲಾನ ಆಜಾದ್ ಮಾದರಿ ಶಾಲೆ ಹಾಗೂ ಸರಕಾರಿ ಮುಸ್ಲಿಂ ವಸತಿ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.


ಅಸೈಮದಕ ಸರಕಾರಿ ಮುಸ್ಲಿಂ ವಸತಿ ಶಾಲೆಗೆ ಹಿಂದಿ ಮತ್ತು ಗಣಕಯಂತ್ರ ಶಿಕ್ಷಕರು, ಪುದುವಿನ ಮೌಲಾನಾ ಆಜಾದ್ ಮಾದರಿ ಶಾಲೆಗೆ ವಿಜ್ಞಾನ ಮತ್ತು ಗಣಿತ ಶಿಕ್ಷಕರು, ಕುದ್ರೋಳಿಯ ಮೌಲಾನಾ ಆಜಾದ್ ಮಾದರಿ ಶಾಲೆ ಗಣಿತ ಶಿಕ್ಷಕರು, ಕಲ್ಲಾಪು ಮೌಲಾನಾ ಆಜಾದ್ ಮಾದರಿ ಶಾಲೆಗೆ ವಿಜ್ಞಾನ ಶಿಕ್ಷಕರು, ಗುರುಕಂಬಳ ಮೌಲಾನಾ ಆಜಾದ್ ಮಾದರಿ ಶಾಲೆಗೆ ವಿಜ್ಞಾನ ಶಿಕ್ಷಕರು ಹಾಗೂ ಮಂಜನಾಡಿಯ ಮೌಲಾನ ಆಜಾದ್ ಮಾದರಿ ಶಾಲೆಗೆ ಗಣಿತ ಶಿಕ್ಷಕರ ಅವಶ್ಯಕತೆ ಇದೆ.


ಈ ಶಾಲೆಗಳಲ್ಲಿ ನೇಮಕಾತಿಗಾಗಿ ಬಿಎ/ಬಿ.ಎಡ್ ಮತ್ತು ಬಿ.ಎಸ್ಸಿ/ಬಿ.ಎಡ್ ಮತ್ತು ಗಣಕಯಂತ್ರ ಶಿಕ್ಷಕರಿಗೆ ಬಿ.ಎಸ್ಸಿ ಕಂಪ್ಯೂಟರ್ ಅಥವಾ ಬಿ.ಸಿ.ಎ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು 2021ರ ನವೆಂಬರ್ 24ರೊಳಗೆ ತಮ್ಮ ಸ್ವವಿವರವನ್ನು ಮಂಗಳೂರಿನ ಪಾಂಡೇಶ್ವರದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಲ್ಲಿಸುವಂತೆ ಕೋರಲಾಗಿದೆ.

 

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top