ಬದಿಯಡ್ಕ: ಪ್ರಸಿದ್ಧ ಪಶುವೈದ್ಯ, ಕನ್ನಡಿಗ ಡಾ. ವೈ.ವಿ. ಕೃಷ್ಣಮೂರ್ತಿ ಬದಿಯಡ್ಕ ಇವರಿಗೆ `ಅಮೃತ ಕನ್ನಡಿಗ' ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಕರ್ನಾಟಕ ರಾಜ್ಯದ ಬೆಂಗಳೂರು ರಂಗವಿಜಯ ಟ್ರಸ್ಟ್ ಈ ರಾಷ್ಟ್ರೀಯ ಸೇವಾ ಪುರಸ್ಕಾರವನ್ನು ನೀಡಿದೆ.
ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನೇಕರನ್ನು ಸನ್ಮಾನಿಸಲಾಗಿತ್ತು. ಗೋಸೇವೆ ವಿಭಾಗದಲ್ಲಿ ಡಾ.ವೈ.ವಿ. ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ಲಭಿಸಿದೆ.
ಬದಿಯಡ್ಕ ಬೋಳುಕಟ್ಟೆಯ ತಮ್ಮ ಮನೆಯಲ್ಲಿ ಪಶುವೈದ್ಯ ವೃತ್ತಿಯನ್ನು ನಡೆಸುತ್ತಿರುವ ಅವರು ಸುಮಾರು 20 ವರ್ಷಗಳಿಂದ ಶ್ರೀರಾಮಚಂದ್ರಾಪುರಮಠದ ಕಾಮದುಘಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು.
...
ಕಳೆದ 20 ವರ್ಷಗಳಿಂದ ಶ್ರೀರಾಮಚಂದ್ರಾಪುರ ಮಠದ ಕಾಮದುಘಾ ಯೋಜನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಈ ಪ್ರಶಸ್ತಿಯು ಬಂದಿದೆ. ಮುಂದೆಯೂ ಗೋಸೇವೆಯಲ್ಲಿ ತೊಡಗಿಕೊಳ್ಳಲು ಶ್ರೀಗುರುಗಳ ಆಶೀರ್ವಾದ, ನಾಡಿನ ಜನತೆಯ ಬೆಂಬಲವಿರಲಿ.
-ಡಾ.ವೈ.ವಿ. ಕೃಷ್ಣಮೂರ್ತಿ, ಪಶುವೈದ್ಯರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ