|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾನಸಿಕ ಆರೋಗ್ಯ ಚರ್ಚೆಯನ್ನು ಮುಖ್ಯವಾಹಿನಿಗೆ ತರಲು ಸಿಎಂಆರ್ ಯು ವಿದ್ಯಾರ್ಥಿಗಳ ದಿಟ್ಟ ನಿರ್ಧಾರ

ಮಾನಸಿಕ ಆರೋಗ್ಯ ಚರ್ಚೆಯನ್ನು ಮುಖ್ಯವಾಹಿನಿಗೆ ತರಲು ಸಿಎಂಆರ್ ಯು ವಿದ್ಯಾರ್ಥಿಗಳ ದಿಟ್ಟ ನಿರ್ಧಾರ

 

ಅಕ್ಟೋಬರ್ 8 ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ; ವರ್ಚುವಲ್ ಪ್ರೋಗ್ರಾಂ ಆಯೋಜನೆ




ಬೆಂಗಳೂರು: ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿ, ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯವು (CMRU) ಅಕ್ಟೋಬರ್ 8 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಿದೆ.


"ಅನ್‌ಮ್ಯೂಟ್ ಆ್ಯಂಡ್ ಎಕೋ" (“Unmut and Echo”) ವಿಷಯದ ಒಂದು ಗಂಟೆ ಅವಧಿಯ ವರ್ಚುವಲ್ ಪ್ರೋಗ್ರಾಂ ಅನ್ನು ಸಿಎಮ್‌ಆರ್‌ಯುನಲ್ಲಿರುವ ಸ್ಕೂಲ್ ಆಫ್ ಸೋಶಿಯಲ್ ಸೈನ್ಸ್ ಮತ್ತು ಮಾನವೀಯತೆ (School of Social Sciences and Humanities)ಯ  Psychedelic Club ವಿದ್ಯಾರ್ಥಿಗಳು ನಡೆಸಲಿದ್ದಾರೆ.


 "ಇಂದಿನ ಅನಿಶ್ಚಿತ ಸನ್ನಿವೇಶಗಳಲ್ಲಿ ಮಾನಸಿಕ ಆರೋಗ್ಯ" ಈವೆಂಟ್‌ನ ಪ್ರಮುಖ ಅಂಶ. ಈ ಚಟುವಟಿಕೆಯನ್ನು ಸ್ಲ್ಯಾಮ್ ಪೋಯೆಟ್ರಿ ಫೋರಮ್ (Slam Poetry form) ನಲ್ಲಿ ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆ, ಸೃಜನಶೀಲ ಬರವಣಿಗೆ ಮತ್ತು ಸ್ಪರ್ಧೆಯ ಅಂಶಗಳನ್ನು ಸಂಯೋಜಿಸುತ್ತದೆ; ಜೊತೆಗೆ, ಪ್ರೇಕ್ಷಕರನ್ನು ಸಹ ಭಾಗವಹಿಸಲು ಆಹ್ವಾನಿಸಲಾಗುತ್ತದೆ.


Psychedelic Club ಮಾನಸಿಕ ಆರೋಗ್ಯ ಜಾಗೃತಿಯನ್ನು ಉತ್ತೇಜಿಸಲು ಮತ್ತು ಮನೋವಿಜ್ಞಾನ ಕ್ಷೇತ್ರದ ಕುರಿತು ಹೆಚ್ಚಿನ ಅರಿವನ್ನುಉಂಟುಮಾಡುವ ಉದ್ದೇಶವನ್ನು ಹೊಂದಿದೆ. ಮಾನಸಿಕ ಆರೋಗ್ಯ ಕುರಿತ  ಚರ್ಚೆಗಳು ನಮ್ಮ ಸಮಾಜದಲ್ಲಿ ಇನ್ನೂ ಚಿಂತನೆಯ ವಿಷಯವಾಗಿರುವ ಸಂದರ್ಭದಲ್ಲಿ, CMRU   ವಿದ್ಯಾರ್ಥಿಗಳು ಮಾನಸಿಕ ಆರೋಗ್ಯ ಕೇಂದ್ರಿತ ಚರ್ಚೆಗಳನ್ನು ಮುಖ್ಯವಾಹಿನಿಗೆ ತರಲು ಮಾನಸಿಕ ಸ್ವಾಸ್ಥ್ಯದ ವಿಷಯವನ್ನು ಪ್ರಜ್ಞಾಪೂರ್ವಕವಾಗಿಯೇ ಆಯ್ಕೆ ಮಾಡಿರುವುದು ವಿಶೇಷವಾಗಿದೆ.


ಮಾನಸಿಕ ಅಸ್ವಸ್ಥತೆಯನ್ನು ಬಹಿರಂಗವಾಗಿ ಚರ್ಚಿಸುವ ಮತ್ತು ವೈಜ್ಞಾನಿಕವಾಗಿ ಚಿಕಿತ್ಸೆ ಪಡೆಯುವ ಅಗತ್ಯದ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ.


ಸ್ಲಾಮ್ ಪೋಯೆಟ್ರಿ (Slam Poetry) ಫೋರಮ್ ನಲ್ಲಿ ಭಾಗವಹಿಸುವವರಿಗೆ 5-6 ನಿಮಿಷಗಳ ಕಾಲ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ಈ ಆನ್‌ಲೈನ್ ಈವೆಂಟ್ ನಲ್ಲಿ ಭಾಗವಹಿಸಲು ನೋಂದಣಿ ಉಚಿತವಾಗಿದೆ.   Google ಫಾರ್ಮ್ ಮೂಲಕ  https://forms.gle/vWWuRWF4gLv57JG28 ನೊಂದಣಿ ಮಾಡಬಹುದು.


ಅಕ್ಟೋಬರ್ 8, 2021 ರಂದು ಮಧ್ಯಾಹ್ನ 2.30 ರಿಂದ 3.30 ರ ನಡುವೆ ಈವೆಂಟ್ ನಡೆಯಲಿದೆ. ಇದು ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ನೋಂದಾಯಿಸಲು ಕೊನೆಯ ದಿನಾಂಕ  ಅಕ್ಟೋಬರ್ 7 (ಸಂಜೆ 5 ಗಂಟೆ ಒಳಗೆ).


ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರತಿವರ್ಷ ಅಕ್ಟೋಬರ್ 10 ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತದೆ. ಮಾನಸಿಕ ಆರೋಗ್ಯಕ್ಕಾಗಿ ವಿಶ್ವ ಒಕ್ಕೂಟವು ಆಯ್ಕೆ ಮಾಡಿರುವ ಈ ವರ್ಷದ ಥೀಮ್ - "ಅಸಮಾನತೆಯ ವಿಶ್ವದಲ್ಲಿ ಆರೋಗ್ಯ"


ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:

ಡಾ ರಾಧಿಕಾ ಸಿಎ

M: 9945411955

Email : radhika.c@cmr.edu.in



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post